ವರ್ಷದ ಕೊನೆ: ಜಿಲ್ಲೆ ಕೊರೋನಾ ಶೂನ್ಯ

ರಾಯಚೂರು ಜ ೧ :-ಕಾಕತಾಳಿಯೋ ಅಥವಾ ವಾಸ್ತವಿಕವಾಗಿ ಕೊರೋನೊ ಮಹಾಮಾರಿ ಅಂತ್ಯಗೊಡಿದೆಯೋ ತಿಳಿಯದಾದರು ವರ್ಷದ ಕೊನೆಯ ದಿನವಾದ ನಿನ್ನೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಶೂನ್ಯ ವರದಿ ಹೊಸ ವರ್ಷಕ್ಕೆ ಜನ ಕೊರೊನಾ ಮುಕ್ತ ಹರ್ಷ ವ್ಯಕ್ತ ಪಡಿಸಿದ್ದಾರೆ.
೨೦೨೦ ಮಾರ್ಚ್ ತಿಂಗಳಿಂದ ಕಾಡಿದ ಕೊರೋನಾ ಮಹಾ ಮಾರಿ ಜನರ ಪಾಲಿಗೆ ಶಿಕ್ಷೆಯಾಗಿತ್ತು. ಮೇ ೧೬ ರಿಂದ ಆರಂಭಗೊಂಡ ಕೊರೋನಾ ಹಾವಳಿಗೆ ಜನ ತತ್ತರಿಸಿದ್ದರು. ನೂತನವಾಗಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ಅಶೋಕ ಗಸ್ತಿರು ಸೇರಿ ೧೫೮ ಜನರನ್ನು ಬಲಿತೆಗೆದುಕೊಂಡ ಮಹಾ ಮಾರಿ ಸುಮಾರು ಐದು ತಿಂಗಳ ಕಾಲ ಜನ ತಲ್ಲಣಗೊಳ್ಳುವಂತೆ ಮಾಡಿತು. ಜಿಲ್ಲೆಯಲ್ಲಿ ಒಟ್ಟು ೧೪೧೫೭ ಜನ ಸೋಂಕಿಗೆ ಗುರಿಯಾಗುವಂತೆ ಮಾಡಲಾಯಿತು. ಇವರಲ್ಲಿ ೧೩೯೩೮ ಗುಣಮುಖರಾಗಿದ್ದಾರೆ.
ಕಳೆದ ೧೫ ದಿನಗಳಿಂದ ಕೊರೊನಾ ಸೋಂಕು ಕುಸಿಯುತ್ತ ಬಂದಿದೆ. ನಿನ್ನೆ ಒಂದೇ ಒಂದು ಸೋಂಕು ಪತ್ತೆಯಾಗದಿರುವುದು ಜನ ಅಕ್ಷರಶಃ ಸಂಭ್ರಮಿಸುವಂತೆ ಮಾಡಿತು. ಕಳೆದ ೧೦ ತಿಂಗಳಿಂದ ಕೊರೊನಾ ಮಹಾಮರಿಯ ವರದಿಂದ ತೀವ್ರ ಮಾನಸಿಕವಾಗಿ ಕುಗ್ಗಿದ ಜನರಿಗೆ ನಿನ್ನೆಯ ವರದಿ ಸಂತಸಗೊಳ್ಳುವಂತೆ ಮಾಡಿದೆ. ಇದು ನಿನ್ನೆಗೆ ಸೀಮಿತಗೊಳ್ಳದೆ ಇದೇ ರೀತಿ ಎಲ್ಲವು ಕೊರೊನಾ ಮುಕ್ತ ಸ್ಥಿತಿ ಮುಂದುವರೆಯಲಿ ಎಂಬ ಹಾರೈಕೆಯಲ್ಲಿ ಇರುವ ಜನರಗೆ ಈ ಸಂತಸ ಭಾಗ್ಯ ಮುಂದುರೆಯುವುದೆ.