ವರ್ಷಕ್ಕೆ ೧ ಕೋಟಿ ಗಳಿಸುವ ವರ ಬೇಕು

ಮುಂಬೈ,ಏ.೩-ಮುಂಬೈನ ೩೭ ವರ್ಷದ ಮಹಿಳೆಯೊಬ್ಬರು ವರನ ಹುಡುಕಾಟ ನಡೆಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆಗೆ ವರ್ಷಕ್ಕೆ ಕನಿಷ್ಠ ೧ ಕೋಟಿ ರೂಪಾಯಿ ಗಳಿಸುವ ವರ ಬೇಕು ಜೊತೆಗೆ ಅವಳು ಮದುವೆಯಾಗಲು ಬಯಸುವ ಸಂಗಾತಿಯ ಬಗೆಗೆ ನಿರ್ದಿಷ್ಟವಾದ ಆಕೆಯ ಇಚ್ಛೆಯ ಪಟ್ಟಿ-ಕರಾರು ತೋರಿಸುವ ಸ್ಪ್ಯಾಪ್‌ಶಾಟ್ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಈ ಪಟ್ಟಿ ಮರಾಠಿ ಭಾಷೆಯಲ್ಲಿಯಲ್ಲಿ ಇದೆ ಇದೀಗ ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ ಮಹಿಳೆ ತಾನು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ. ಆಕೆಗೆ ಮುಂಬೈನಲ್ಲಿ ಸ್ವಂತ ಮನೆ, ಉದ್ಯೋಗ ಅಥವಾ ವ್ಯಾಪಾರ ಇರುವವರು ಬೇಕು. ಇದಲ್ಲದೆ, ಅವಳು ವಿದ್ಯಾವಂತ ಕುಟುಂಬವನ್ನು ಬಯಸುತ್ತಾಳೆ ಮತ್ತು ಶಸ್ತ್ರಚಿಕಿತ್ಸಕ ಅಥವಾ ಸಿಎಗೆ ಆದ್ಯತೆ ನೀಡುತ್ತಾಳೆ.
ಆಕೆಗೆ ವರ್ಷಕ್ಕೆ ಕನಿಷ್ಠ ೧ ಕೋಟಿ ರೂಪಾಯಿ ಗಳಿಸುವ ವ್ಯಕ್ತಿ ಬೇಕು ಎಂದು ಸ್ಕ್ಯಾಪ್‌ಶಾಟ್ ಬಹಿರಂಗಪಡಿಸಿದೆ.
ಈ ಪೋಸ್ಟ್ ಏಪ್ರಿಲ್ ೨ ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ ಇದು ೭೪,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಶೇರ್ ಕೂಡ ೧,೩೦೦ ಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ ಮತ್ತು ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಹಲವರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
ಒಬ್ಬ ವ್ಯಕ್ತಿ ಬರೆದಿದ್ದಾರೆ, ಐಟಿ ಡೇಟಾ ಪ್ರಕಾರ, ಭಾರತದಲ್ಲಿ ಕೇವಲ ೧.೭ ಲಕ್ಷ ಜನರು ೧ ಕೋಟಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ. ಆದ್ದರಿಂದ ಅವರು ೩೭ ನೇ ವಯಸ್ಸಿನಲ್ಲಿ ತಮ್ಮ ’ಕನಸಿನ’ ಸಂಗಾತಿಯನ್ನು ಕಂಡುಕೊಳ್ಳುವ ಸಾಧ್ಯತೆಗಳು ೦.೦೧%.
ಮತ್ತೊಬ್ಬರು, ಅದರಲ್ಲಿ ತಪ್ಪೇನೂ ಇಲ್ಲ. ಪ್ರತಿಯೊಬ್ಬರಿಗೂ ಆಯ್ಕೆ ಮಾಡುವ ಹಕ್ಕಿದೆ.
ಪತಿಯನ್ನು ಆಯ್ಕೆ ಮಾಡುವ ಹಕ್ಕು ಆಕೆಗಿದೆ. ಹಾಗೆಯೇ ಪುರುಷರಿಗೂ ಅವಳನ್ನು ತಿರಸ್ಕರಿಸುವ ಹಕ್ಕಿದೆ ಎಂದು ಬರೆದಿದ್ದಾರೆ.