ವರ್ಲ್ಡ್ ವಿಷನ್ ಇಂಡಿಯಾ ಏರಿಯಾ ಡೆವಲಪ್‌ಮೆಂಟ್ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.08: ಮಕ್ಕಳ ಸುರಕ್ಷಾ ಸಪ್ತಾಹದ ಹಿನ್ನಲೆಯಲ್ಲಿ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗುಂಪುಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ 15 ಬೆಂಚು ಹಾಗೂ 40 ಸೈಕಲ್ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್  ಶರಣಪ್ಪ ಐ.ಎ.ಎಸ್., ಉದ್ಘಾಟನೆ ಮಾಡಿ ವಿತರಣೆ ಮಾಡಿದರು  ಬಸಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಪ್ರೇಮಲತಾ ವರ್ಲ್ಡ್ ವಿಷನ್ ತಾಲ್ಲೂಕು ಸಂಯೋಜಕರು ತಾಲ್ಲೂಕು ಪಂಚಾಯ್ತಿ, ಇಸಿಓ ಶ್ರೀ.ಹಿರೇಮಠ ಶಿಕ್ಷಣ ಇಲಾಖೆ ಮತ್ತು ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಓ ಮತ್ತು ಪಿ.ಸಿ.ಸಿ ಸದಸ್ಯರು 3 ಅತ್ಯುತ್ತಮ ಕಲೆಗಳನ್ನು ಮೌಲ್ಯಮಾಪನ ಮಾಡಿ ಬಹುಮಾನಗಳನ್ನು ನೀಡಿದರು ನಂತರ 300 ಮಕ್ಕಳಿಗೆ ಪೋಸ್ಟರ್ ಮತ್ತು ಗ್ಯಾಲರಿ ಮೂಲಕ ಮಕ್ಕಳ ರಕ್ಷಣಾ ಸಂದೇಶಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನೀಡಿದರು.