ವರ್ತೂರ್ ಪ್ರಕಾಶ್ ಮಾತಿನ ಮೇಲೆ ಹಿಡಿತವಿರಲಿ

ಲಾರ,ಏ,೨- ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಹೊರವಲಯದ ಮೆಡಿಕಲ್ ಕಾಲೇಜು ಬಳಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕರ ಸಭೆಯನ್ನು ದಿನಾಂಕ ೦೫-೦೪-೨೦೨೩ ರಂದು ಹಮ್ಮಿಕೊಳ್ಳಲಾಗಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿಯವರು ಭಾಗವಹಿಸಲಿದ್ದಾರೆ ಎಂದು ಕೋಲಾರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಪ್ರಸಾದಬಾಬು ತಿಳಿಸಿದ್ದಾರೆ.ಈ ಸಭೆಗೆ ಸುಮಾರು ೨ ಲಕ್ಷಕ್ಕೂ ಅಧಿಕ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಇತ್ತೀಚೆಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಪತ್ರಿಕಾ ಹೇಳಿಕೆಗಳಲ್ಲಿ ಕಾಂಗ್ರೆಸ್‌ನವರು ರಾಹುಲ್‌ಗಾಂಧಿಯವರನ್ನು ಕರೆಸಿದರೆ ನಾನು ಪ್ರಧಾವಿ ಮೋದಿಯವರನ್ನು ಕರೆಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರನ್ನ ಬೇಕಾದರೂ ಕರೆಸಬಹುದು. ಭಾರತ ದೇಶದ ಎಲ್ಲಾ ಬಿಜೆಪಿ, ಆರ್.ಎಸ್.ಎಸ್.ನಾಯಕರನ್ನು ಕರೆಸಿ ವರ್ತೂರು ಪ್ರಕಾಶ್ ರವರೇ ? ಕಾಂಗ್ರೆಸ್ ಕಾರ್ಯಕರ್ತರು ಹೆದುರುವುದಿಲ್ಲ ಎಂದು ಕೋಲಾರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಪ್ರಸಾದಬಾಬು ಹೇಳಿದಾರೆ.ಸಿದ್ಧರಾಮಯ್ಯ ಅವರು ರಾಜ್ಯ ಮತ್ತು ರಾಷ್ಟ್ರ ನಾಯಕರು. ಅವರನ್ನು ಟೀಕೆ ಮಾಡುವ ಯೋಗ್ಯತೆ ನಿಮಗಿಲ್ಲ. ವರ್ತೂರು ಪ್ರಕಾಶ್ ಅವರೇ, ನೀವು ಸೋಲಿನ ಭೀತಿಯಿಂದ ಬಿಜೆಪಿ ಪಕ್ಷವನ್ನು ಸೇರಿದ್ದೀಯಾ? ನೀನು ಸಿದ್ಧರಾಮಯ್ಯ ಅವರ ಹೆಸರೇಳಿಕೊಂಡು ಕೋಲಾರಕ್ಕೆ ಬಂದಿದ್ದು, ಸಾಮಾನ್ಯ ಜನರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರ ಹೆಸರು ಹೇಳಲು ನಿನಗೆ ಯೋಗ್ಯತೆ ಇಲ್ಲ. ನೀನು ೨೦೧೮ ರಲ್ಲಿ ೩ನೇ ಸ್ಥಾನ, ೨೦೨೩ ರಲ್ಲಿ ೪ನೇ ಸ್ಥಾನ ಖಚಿತ ಎಂಬುದನ್ನು ತಿಳಿದುಕೋ? ಒಬ್ಬ ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಇಲ್ಲವಾದಲ್ಲಿ ನಿಮ್ಮ ಮನೆಯ ಮುಂದೆ ಧರಣಿ ಮಾಡಬೇಕಾಗುತ್ತದೆ. ನೀನು ಕೋಲಾರಕ್ಕೆ ಬರುವ ಮೊದಲೇ ೨೦೦೨ರಲ್ಲಿ ನಗರಸಭೆಗೆ ಸ್ಪರ್ಧಿಸಿದ ನನಗೆ ಕೋಲಾರ ತಾಲೂಕು ಮತದಾರರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ.ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಟೀಕಿಸುವುದನ್ನು ಮುಂದುವರೆಸಿದರೆ ನಿಮ್ಮ ವಿರುದ್ಧ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.