ವರ್ತೂರ್‌ಗೆ ಕಾಂಗ್ರೆಸ್ ಮೇಲೆ ವ್ಯಾಮೋಹ

ಕೋಲಾರ,ಜ.೯-ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರಿಗೆ ಇತ್ತೀಚೆಗೆ ಕಾಂಗ್ರೆಸ್ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಆದರೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮದೆ ಆದ ಪಕ್ಷ ರಚನೆ ಮಾಡುವ ಮೂಲಕ , ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಮಾತನಾಡುವ ಮೂಲಕ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.
ನಂತರ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಅವರನ್ನ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಸ್ವತಹ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೇಳಿದ್ದರು. ಈ ಬೆನ್ನಲ್ಲೆ ಕಾರ್ಯಕ್ರಮವೊಂದರಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನ ಹಾಡಿ ಹೊಗಳಿದ್ದಾರೆ. ಈ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ನಾನು ಸಹಾಯ ಮಾಡಲು ಆಗಲಿಲ್ಲ, ಆದರೆ ಪರೋಕ್ಷವಾಗಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು, ತಮ್ಮ ಅಭ್ಯರ್ಥಿಗಳಿಗೆ ಸಹಾಯ ಮಾಡಿದ್ದಾರೆಂದು ಹೇಳಿದರು.
ಅಲ್ಲದೆ ಕೆ.ಎಚ್.ಮುನಿಯಪ್ಪ ಅವರು ಇದು ಕಾಂಗ್ರೆಸ್ ನ ದುಡ್ಡು ಎಂದು ತಮ್ಮ ಬೆಂಬಲಿಗರಿಗೆ ನೀಡಿದ್ದು, ಅವರಿಗೆ ಧನ್ಯವಾದಗಳನ್ನ ಹೇಳಿದರು. ಇನ್ನು ನಮ್ಮ ಬೆಂಬಲಿಗರಿಗೆ ದುಡ್ಡು ಕೊಡುವ ಅಗತ್ಯವಿರಲಿಲ್ಲ, ವರ್ತೂರ್ ಪ್ರಕಾಶ್ ಪರಿಸ್ಥಿತಿ ಸರಿಯಿಲ್ಲ ಎಂದು, ಅವರ ಕಾರ್ಯಕರ್ತರನ್ನ ಕೈಹಿಡಿಯಬೇಕೆಂದು, ಈ ಒಂದು ಕಷ್ಟ ಕಾಲದಲ್ಲಿ , ಇದು ಕಾಂಗ್ರೇಸ್ ದುಡ್ಡು ಎಂದು ಕೆ.ಎಚ್.ಮುನಿಯಪ್ಪ ಸಹಾಯ ಮಾಡಿದ್ದಾರೆಂದು ಕಾಂಗ್ರೇಸ್ ಪರ ಬ್ಯಾಟಿಂಗ್ ನಡೆಸಿದ್ದಾರೆ.