
ಕೋಲಾರ,ಮಾ,೬- ವಿ.ಆರ್.ಪಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಹೆಸರಿನಲ್ಲಿ ಮಹಿಳಾ ಮತದಾರರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಸೀರೆ ಗಿಫ್ಟ್ ನೀಡಿದರು.
ತಾಲೂಕಿನ ಕೋಗಿಲಹಳ್ಳಿ ಬಳಿಯ ಇರುವ ತಮ್ಮ ನಿವಾಸದ ಬಳಿ ಬಿಜೆಪಿ ಪಕ್ಷದ ಚಿಹ್ನೆ ಬಳಸದೆ ಸೀರೆ ಹಂಚಿ ಮಾಡಿದರು.
ನೂತನವಾಗಿ ಸೊಸೈಟಿ ನಿರ್ಮಾಣ ಮಾಡಿಕೊಂಡಿರುವ ವರ್ತೂರು ಪ್ರಕಾಶ್ ವಿತರಿಸುವ ಸೀರೆಗಳನ್ನು ಪಡೆದುಕೊಳ್ಳಲು ಮಹಿಳೆಯರು ಮುಗಿಬಿದ್ದರು.
ಸೀರೆಗಳನ್ನು ತೆಗೆದುಕೊಳ್ಳಲು ಮಾಜಿ ಸಚಿವರ ಮನೆಯ ಬಳಿ ೫೦೦ಕ್ಕೂ ಹೆಚ್ಚು ಮಹಿಳೆಯರು ಜಮಾವಣೆಗೊಂಡಿದ್ದರು. ಸೀರೆ ತೆಗೆದುಕೊಳ್ಳಲು ಆಗಮಿಸಿದ ಮಹಿಳೆಯರಿಗೆ ಬಂದವರಿಗೆ ಭರ್ಜರಿ ಚಿಕನ್ ಬಿರಿಯಾನಿ ಸಹ ವ್ಯವಸ್ಥೆ ಮಾಡಿದ್ದ ಹಿನ್ನಲೆಯಲ್ಲಿ ಚಿಕನ್ ಬಿರಿಯಾನಿಗಾಗಿ ಮುಗಿಬಿದ್ದ ಘಟನೆ ನಡೆಯಿತು.
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಕೇವಲ ಒಂದೂ ಪಕ್ಷಕ್ಕೆ ಸೀಮಿತವಾಗಿದೆ, ಹಾಗಾಗಿ ನಾವು ಸೊಸೈಟಿ ಮಾಡಿ ಜಿಲ್ಲೆಯಲ್ಲಿ ಹಂಚುತ್ತಿದ್ದೇವೆ. ಇದು ರಾಜಕೀಯ ಗಿಮಿಕ್ ಅಲ್ಲ, ಸಿದ್ದರಾಮಯ್ಯ ಸ್ಪರ್ಧೆ ಮಾಡಿದರು ನಾನು ೫೦ ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ, ಕಾಂಗ್ರೆಸ್‌ಗೆ ಓಟು ಹಾಕಿಸುವವರು ಯಾರು ಇಲ್ಲ ಎಂದು ವರ್ತೂರು ಪ್ರಕಾಶ್ ತಿಳಿಸಿದರು.