ವರ್ತಕರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ರವಿಶಂಕರ್ ಪುನಾರಾಯ್ಕೆ

ಚಾಮರಾಜನಗರ, ಡಿ.25- ಚಾಮರಾಜನಗರ ವರ್ತಕರ ಸಂಘದ 2020-21ನೇ ಸಾಲಿನ ಅಧ್ಯಕ್ಷರಾಗಿ ಕೆ.ಎಸ್. ರವಿಶಂಕರ್ ಅವರು ಪುನಾರಾಯ್ಕೆಯಾಗಿದ್ದಾರೆ.
ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ವರ್ತಕರ ಸಂಘದ ಕಚೇರಿಯಲ್ಲಿ ನಡೆದ 2020-21 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಿತು. ಕಳೆದ ಸಾಲಿನಲ್ಲಿದ್ದ ಪದಾಧಿಕಾರಿಗಳೇ ಬಹುತೇಕ ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಘದ ಉಪಾಧ್ಯಕ್ಷರಾಗಿ ಜಿ. ರಮೇಶ್, ಕಾರ್ಯದರ್ಶಿ ಯಾಗಿ ಕೆ.ಎಸ್. ಚಿದಾನಂದಗಣೇಶ್, ಸಹ ಕಾರ್ಯದರ್ಶಿಯಾಗಿ ಬಿ. ಶ್ರೀಧರ್, ಖಜಾಂಚಿಯಾಗಿ ಸಿ.ಎ. ನಾರಾಯಣ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ನಿರ್ದೇಶಕರಾಗಿ ಎ. ಜಯಸಿಂಹ, ಎಚ್.ಬಿ. ರಾಜಶೇಖರ್, ಎನ್. ಶಂಕರ್, ಸಿ.ಎಸ್. ಮಹೇಶ್‍ಕುಮಾರ್(ಅ.ಭ)ಬ್ರಿಜೇಶ್ ಒಲಿವೆರಾ, ಎನನ್. ಸತೀಶ್, ಸಿ.ಜೆ. ಪದ್ಮಕುಮಾರ್, ಪಿ. ರಾಮಚಂದ್ರ, ಸಿ.ಎಸ್. ಮಹೇಶಕುಮಾರ್(ಮಂಜು)ಎ. ಶ್ರೀನಿವಾಸನ್, ಸಿ. ರಂಗರಾಜು, ಸೈಯದ್ ಅಲ್ತಾಪ್, ಎಂ. ಯೋಗೀಶ್, ಆನಂದಕುಮಾರ್,ಎಚ್.ಬಿ. ವಿಶ್ವಕುಮಾರಸ್ವಾಮಿ, ಎನ್. ಉದಯಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಸಂಘದ ಅಭಿವೃದ್ದಿಗೆ ಶ್ರಮಿಸುವೆ :- ಈ ವೇಳೆ ನೂತನ ಅಧ್ಯಕ್ಷ ಕೆ.ಎಸ್. ರವಿಶಂಕರ್ ಮಾತನಾಡಿ, ಮತ್ತೊಂದು ಅವಧಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಹಾಗು ಹಿರಿಯ ವರ್ತಕರರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇವೆ. ಕೋವಿಡ್ ಕಾರಣದಿಂದ ಕಳೆದ ವರ್ಷ ಕಾರ್ಯಕ್ರಮಗಳನ್ನು ರೂಫಿಸಲು ಸಾಧ್ಯವಾಗಿಲ್ಲ. ಅದರು ಸಹ ವರ್ತಕರ ಸಂಘ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಲಾಕ್‍ಡೌನ್ ಸಂದರ್ಭದಲ್ಲಿ ಕರ್ತವ್ಯನಿರತರಾಗಿದ್ದ ಕೋರೊನಾ ವಾರಿಯರ್ಸ್‍ಗೆ ಸತತ 15 ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು. ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ, ಚೆಕ್‍ಪೋಸ್ಟ್ ಕರ್ತವ್ಯದಲ್ಲಿದ್ದ ಪೊಲೀಸರು. ಪೌರ ಕಾರ್ಮಿಕರರಿಗೆ ಉಪಹಾರ, ಕುಡಿಯುವ ನೀರು, ಮಾಸ್ಕ್. ಸ್ಯಾನಿಟೈಸರ್ ನೀಡುವ ಮೂಲಕ ಕೋರಾನ್ ವಿರುದ್ದ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ವರ್ತಕರಿಂದ ಆಹಾರ ಹಾಗು ಇತರೇ ಸಾಮಗ್ರಿಗಳನ್ನು ಸಂಗ್ರಹಿಸಿ, ಖುದ್ದು ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಿ, ಅವರಿಗೆ ವಿತರಿಸಲಾಗಿತ್ತು ಎಂದರು.
ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಸಹಕಾರದಿಂದ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸುವ ಜೊತೆಗೆ ವರ್ತಕರ ಕುಂದುಕೊರತೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ರವಿಶಂಕರ್ ತಿಳಿಸಿದರು.
ಚುನಾವಣಾಧಿಕಾರಿ ವಿ. ಪ್ರಭಾಕರ್, ಸಹ ಚುನಾವಣಾಧಿಕಾರಿ ಎಸ್. ಬಾಲಸುಬ್ರಮಣ್ಯ, ಕಾನೂನು ಸಲಹೆಗಾರ ಸಿ.ಜಿ. ನಂದಕುಮಾರ್ ಕರ್ತವ್ಯ ನಿರ್ವಹಿಸಿದರು.