ವರ್ಣ ಮಾತ್ರಂ ಕಲಿಸಿದಾತ ಗುರು

ವಿಜಯಪುರ, ಸೆ.6-ವರ್ಣ ಮಾತ್ರಂ ಕಲಿಸಿದಾತ ಗುರು ಎಂದು ಭಾರತೀಯ ಪರಂಪರೆಯು ಸಾರಿ ಹೇಳುತ್ತದೆ.ಪ್ರತಿಯೊಬ್ಬರಜೀವನದಲ್ಲಿಗುರುವಿನ ಸ್ಥಾನ ತುಂಬ ಮಹತ್ವವಾದದ್ದು, ಏಕೆಂದರೆ “ವಿದ್ಯಾರ್ಥಿಗಳನ್ನುಅಚ್ಚುಕಟ್ಟಾಗಿಕೆತ್ತಿಅದಕ್ಕೊಂದುರೂಪಕೊಟ್ಟು ವ್ಯಕ್ತಿತ್ವ ನೀಡುವ ಶಿಲ್ಪಿಯೇ ಶಿಕ್ಷಕ” ಅಂತಹ ಶಿಕ್ಷಕರ ಋಣವನ್ನು ನಾವು ಏನು ಕೊಟ್ಟರುತೀರಿಸಲು ಸಾಧ್ಯವಿಲ್ಲವೆಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಆಧ್ಯಕ್ಷೆಯಾದ ಪ್ರೊ. ಶೀಲಾ ಬಿರಾದಾರರವರು ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶಾಂತಿನಿಕೇತನಅಂತರಾಷ್ಟ್ರೀಯ (ಸಿ ಬಿ ಎಸ್ ಇ) ಶಾಲೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯಲ್ಲಿಡಾ// ಸರ್ವೇಪಲ್ಲಿರಾಧಾಕೃಷ್ಣನ್‍ರವರ ಬಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತ್ತರಿದ್ದ ಶಾಂತಿನಿಕೇತನಅಂತರಾಷ್ಟ್ರೀಯ( ಸಿ ಬಿ ಎಸ್ ಇ) ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ರೀಜೇಶ ಪಿ ಎನ್‍ರವರು ಶಿಕ್ಷಕರೆಲ್ಲರಿಗೂ ಶುಭಹಾರೈಸಿದರು ಕಾರ್ಯಕ್ರಮದಲ್ಲಿ ಶ್ರೀಯುತ ಭರತ್ ಬಿರಾದಾರ ಶಾಲೆಯ ಶೈಕ್ಷಣಿಕಕಾರ್ಯ ಸಂಯೋಜಕೀಯರಾದ ಶ್ರೀಮತಿ ಕಮರಪಾರಾಶಾಲೆಯಎಲ್ಲ ಭೋಧಕ ವರ್ಗದವರು ಉಪಸ್ಥಿತರಿದ್ದರು.

10ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರ ಸಮೀರ ಮಮ್ಮದಾಪುರ ಹಾಗೂ ದೀಯಾತೋಷನೀವಾಲ್ ನಿರೂಪಿಸಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.