ವರ್ಣಸಿಂಧು ತಂಡದಿಂದ ವರ್ಣರಂಜಿತ ನೃತ್ಯ…

ಕಲಬುರಗಿ ಕೋಟೆ ಎದುರಿನ ಆವರಣದಲ್ಲಿ ಹಿಂದು ಜಾಗರಣ ವೇದಿಕೆ ಪ್ರತಿಷ್ಠಾಪಿಸಿದ ಹಿಂದು ಮಹಾಗಣಪತಿ ವೇದಿಕೆಯಲ್ಲಿ ವರ್ಣಸಿಂಧು ನೃತ್ಯಕಲಾಕೇಂದ್ರದ ತಂಡದವರು ಅನಂತ ಚಿಂಚನಸೂರ ನಿರ್ದೇಶನದಲ್ಲಿ ದೇಶಭಕ್ತಿಗೀತೆಯ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಪ್ರತಿಕ್ಷಾ ಬಾಬುರಾವ್,ಶಬರಿ,ಕಾಳಿಕಾ,ಅಸ್ಮಿತಾ,ಲಾವಣ್ಯ,ಪ್ರಿಯಾಂಕಾ,ಸಂಜನಾ,ಸುಪ್ರಿಯಾ,ಪದ್ಮಿನಿ,ಶ್ರೇಯಾ ಸೇರಿದಂತೆ ಹಲವರು ಭಾಗವಹಿಸಿದರು.