ವರ್ಚುವಲ್ ಮೂಲಕ ಪಾಪನಾಶ ದೇವಸ್ಥಾನದ ಅಡಿಗಲ್ಲು ಸಮಾರಂಭ ನೇರವೇರಿಸಿದ ಪ್ರಧಾನಿ ಮೋದಿ

ಬೀದರ:ಮಾ.7:ಪ್ರಸಾದ ಯೋಜನೆಯಡಿ ಬೀದರ ನಗರದ ಪಾಪನಾಶ ದೇವಸ್ಥಾನದ ಅಡಿಗಲ್ಲು ಸಮಾರಂಭವನ್ನು ವರ್ಚುವಲ್ ಮೂಲಕ ಜಮ್ಮು ಕಾಶ್ಮಿರದ ಶ್ರೀನಗರದಿಂದ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ನೇರವೆರಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ, ಬೀದರ ಕ್ಷೇತ್ರದ ಸಂಸದರು ಹಾಗೂ ಕೇಂದ್ರ ಸಚಿವರಾದ ಭಗವಂತ ಖೂಬಾರವರು ಮಾತನಾಡಿ, ನಮ್ಮ ಪ್ರಧಾನಿ ಮೋದಿಜಿಯವರು, ನಮ್ಮೇಲ್ಲ ಶಿವ ಭಕ್ತರಿಗೆ ಶಿವರಾತ್ರಿ ಹಬ್ಬದ ಕೊಡುಗೆಯಾಗಿ, ಕೋಟಿಲಿಂಗ ಪಾಪನಾಶ ದೇವಸ್ಥಾನಕ್ಕೆ ರೂ. 22 ಕೋಟಿ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಅಡಿಗಲ್ಲು ಇಡುವುದರ ಮೂಲಕ ಹಬ್ಬದ ಉಡುಗರೆಯನ್ನು ನೀಡಿದ್ದಾರೆ. ಎಲ್ಲಾ ಶಿವಭಕ್ತರ ಪರವಾರಿ ಮೋದಿಜಿಯವರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ದೇಹಲಿಯಲ್ಲಿ ಪಕ್ಷದ ಸಭೆಗಳು ಇರುವುದರಿಂದ ಸಚಿವಾಲಯದ ಕಾರ್ಯಲಯದಿಂದ ಆನ್‍ಲೈನ್ ಮೂಲಕ ಮಾತನಾಡಿದ ಖೂಬಾ, ನಮ್ಮ ದೇಶವು ಸಾವಿರಾರು ವರ್ಷಗಳ ಇತಿಹಾಸವಿರುವ ಸಂಸ್ಕøತಿ ಹೊಂದಿದ್ದು, ಋಷಿ ಮುನಿಗಳ ದೇಶವಾಗಿರುವುದರಿಂದ, ನಮ್ಮ ದೇಶದ ಮೇಲೆ ಹಲವಾರು ಬಾರಿ ಆಕ್ರಮಣಗಳು ನಡೆದವು, ನಮ್ಮ ಧರ್ಮ ಸಂಸ್ಕøತಿಯ ವಿನಾಶಕ್ಕೆ ಪ್ರಯತ್ನಗಳು ನಡೆದವು, ಆದರೂ ಸಹ ನಮ್ಮ ಧರ್ಮ, ಸಂಸ್ಕøತಿಗೆ ಯಾವೂದೇ ಧಕ್ಕೆಯಾಗಿಲ್ಲಾ, ಕೇವಲ ನಮ್ಮ ದೇವಸ್ಥಾನಗಳಿಗೆ ಧಕೆಯಾಗಿತ್ತು, ಆದರೆ ಮೋದಿಜಿಯವರು ಪ್ರಧಾನಿಯಾದ ಮೇಲೆ, ದೇಶದ ಎಲ್ಲಾ ಪುರಾತನ ದೇವಸ್ಥಾನಗಳ ಅಭಿವೃದ್ದಿಗೆ ಒತ್ತು ನೀಡಿದ್ದಾರೆ, ಇತ್ತಿಚ್ಚೇಗಷ್ಟೆ ಅಯೋಧ್ಯೆಯ ರಾಮಮಂದಿರದ ಪುನರ್ ನಿರ್ಮಾಣವೆ ಇದಕ್ಕೊಂದು ಉತ್ತಮ ಉದಾಹರಣೆ ಎಂದರು.
ವಿಶ್ವಕ್ಕೆ ಆಧ್ಯಾತ್ಮಿಕ, ಶೈಕ್ಷಣೀಕ, ಆರೋಗ್ಯ ಜ್ಞಾನ ನೀಡಿರುವ ದೇಶ ನಮ್ಮದು, ನಮ್ಮ ಪರಂಪರೆ ಸಂಸ್ಕಾರ, ಸಂಸ್ಕøತಿ ಉಳಿಸುವ ಕೆಲಸ ನಮ್ಮ ಮೋದಿ ಸರ್ಕಾರದಿಂದಾಗುತ್ತಿದೆ, ಅದರ ಫಲವೆ ಪಾಪನಾಶ ದೇವಾಲಯದ ಅಭಿವೃದ್ದಿ ಎಂದರು, ಪ್ರಸಾದ ಯೋಜನೆಯಡಿ ದೇವಸ್ಥಾನಗಳ ಅಭಿವೃದ್ದಿಗೆ ರೂ. 5 ಕೋಟಿ ಅನುದಾನವಿದೆ ಆದರೆ ನಾನು ನಮ್ಮ ಸರ್ಕಾರಕ್ಕೆ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಸದರಿ ದೇವಸ್ಥಾನದ ಅಭಿವೃದ್ದಿಗೆ ರೂ. 25 ಕೋಟಿ ಅನುದಾನ ಕೇಳಿ, ಡಿ.ಪಿ.ಆರ್.ಸಿದ್ದಗೊಳಿಸಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿಕೊಂಡಿದ್ದೆ, ಅದರಂತೆ 22 ಕೋಟಿ ಅನುದಾನ ಮಂಜೂರಿಯಾಗಿದೆ, ಸದರಿ ದೇವಸ್ಥಾನದ ಅಭಿವೃದ್ದಿ ಕಾಮಗಾರಿಗಳು ಶಿಘ್ರದಲ್ಲಿ ಪ್ರಾರಂಭಗೊಳ್ಳಲಿವೆ ಎಂದು ತಿಳಿಸಿದರು.
ದೇಶದ ಅರ್ಥವ್ಯವಸ್ಥೆಗೆ ಪ್ರವಾಸೋದ್ಯಮದ ಅಭಿವೃದ್ದಿ ಅತಿ ಮುಖ್ಯವಾಗಿದೆ, ಪ್ರವಾಸೋದ್ಯಮದಿಂದ ನಮ್ಮಲ್ಲಿಯ ವ್ಯಾಪಾರ ವಹಿವಾಟು, ಉದ್ಯೋಗಗಳು ಹೇರಳವಾಗಿ ದೊರೆಯಲಿವೆ, ನಮ್ಮ ಭಾಗದ ಅಭಿವೃದ್ದಿ ವೇಗವಾಗಿ ಆಗಲಿದೆ ಎಂದರು.
ಕಳೆದ 10 ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಜನ ಸ್ವತಃ ಮೆಚ್ಚುಗೆಯ ಮಾತಾಡುತ್ತಿದ್ದಾರೆ, ಸೋಲಾರ್ ಪಾರ್ಕ, ಹೈವೆಗಳು, ರೈಲ್ವೆಗಳು, ಸೈನಿಕ ಶಾಲೆ, ಏರಪೋರ್ಟ, ಸಾಮಾಜಿಕ ಸುರಕ್ಷತೆ ಯೋಜನೆಗಳು ಜನರಿಗೆ ತಲುಪಿಸಿದ್ದೇನೆ, ಇದರ ಜೊತೆಗೆ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದ್ದೇನೆ, ಈ ಬಾರಿಯೂ ಎಂದಿನಂತೆ ಕ್ಷೇತ್ರದ ರೈತರು ಹಾಗೂ ಎಲ್ಲರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು, ಜನಸೇವೆ ಮಾಡುವುದು ನನ್ನ ಕರ್ತವ್ಯ ಹಾಗೂ ಧರ್ಮವೆಂದು ತಿಳಿದು ಸೇವೆ ಮಾಡುತ್ತಿದ್ದೇನೆ ಎಂದರು.
ಶಿವರಾತ್ರಿ ಹಬ್ಬದ ಮೊದಲ ದಿನವಾದ ಇಂದು ಈ ಕಾಮಗಾರಿಗೆ ಪ್ರಧಾನಿ ಮೋದಿಜಿಯವರು ಚಾಲನೆ ಕೊಟ್ಟಿರುವುದು ಅತಿ ಸಂತೋಷದಾಯಕವಾದ ವಿಷಯವಾಗಿದೆ, ಶಿಘ್ರದಲ್ಲಿ ಕಾಮಗಾರಿ ಪ್ರಾರಂಭಗೊಂಡು, ಮುಂದಿನ ದಿನಗಳಲ್ಲಿ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ. ಇಕ್ಸಾ ಇಲ್ಲಾಹಿ, ಅಧಿಕಾರಿಗಳಾದ ಚಂದರ ನಾಯಕ ಮತ್ತು ಸಹಾಯಕ ಆಯುಕ್ತರಾದ ಶ್ರೀ ಪ್ರಭು ರೆಡ್ಡಿ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸೊಮನಾಥ ಪಾಟೀಲ್, ಬಿಜೆಪಿ ಮುಖಂಡರಾದ ರೌಫೋದ್ಧಿನ ಕಚೋರಿವಾಲೆ, ನಗರಸಭೇ ಸದಸ್ಯ ರಾಜು ಚಿಂತಾಮಣಿ, ಪಾಪನಾಶ ದೇವಸ್ಥಾನದ ಮುಖಂಡರಾದ ಚಂದ್ರಕಾಂತ ಶೇಟಕಾರ, ಬಿಜಿ ಶೇಟಕಾರ, ರಮೇಶ ಪಾಟೀಲ್ ಸೋಲಪೂರ, ಇತರರು ಉಪಸ್ಥಿತರಿದ್ದರು.