ವರ್ಗಾವಣೆ ಮಾಡಿ ಇಲ್ಲವೆ ದಯಾಮರಣಕ್ಕೆ ಅನುಮತಿ ನೀಡಿ:ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ

ವಿಜಯಪುರ,ಮಾ.1:ದಯಾಮರಣ ನೀಡಬೇಕೇಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಪೆÇಲೀಸ್ ಸಿಬ್ಬಂದಿ ಹಾಗೂ ಪುತ್ರರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪೆÇಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೆÇಲೀಸರಿಗೆ ಇಲಾಖೆಯಲ್ಲಿ ಸಾಮಾನ್ಯ ವರ್ಗದವರಿಗೆ ಕಳೆದ ನಾಲ್ಕು ವರ್ಷಗಳಿಂದ ವರ್ಗಾವಣೆ ನೀಡಿಲ್ಲ.
ಡಿಜಿ ಅವರ ಆದೇಶದಂತೆ ಪಾರದರ್ಶಕವಾಗಿ ಪೆÇೀರ್ಟಲ್ ಪ್ರಕಾರ ಅರ್ಹ ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನಲೆ ಸಾಮಾನ್ಯ ವರ್ಗದ ಪೆÇಲೀಸ್ ಸಿಬ್ಬಂದಿ ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ವರ್ಗಾವಣೆ ಮಾಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಅನಾರೋಗ್ಯ ಪೀಡಿತರು, ವಿಕಲಾಂಗ ಪೆÇೀಷಕರು ಇದ್ದಾರೆ.
ಒಬ್ಬನೇ ಮಗ ಪ್ರಕರಣಗಳಿವೆ. ಅದಕ್ಕಾಗಿ ಪೆÇಲೀಸ್ ಸಿಬ್ಬಂದಿ ವರ್ಗಾವಣೆ ಬಯಸಿ ಮನವಿ ಸಲ್ಲಿಸಿದ್ದರೂ ತಮ್ಮ ಮನವಿಗೆ ಸರಕಾರ ಇದುವರೆಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವರು ಪತಿ ಪತ್ನಿ ಹಾಗೂ ನಿವೃತ್ತ ಯೋಧರ ವರ್ಗಾವಣೆಗೆ ಆದೇಶ ಮಾಡಿರುತ್ತಾರೆ.
ಇದೇ ರೀತಿ ಸಾಮಾನ್ಯ ವರ್ಗದ ಪೆÇಲೀಸರಿಗೂ ವರ್ಗಾವಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪೆÇಲೀಸ್ ಸಿಬ್ಬಂದಿ ಪುತ್ರರು ಕೂಡಾ ಮನವಿಯಲ್ಲಿ ವರ್ಗಾವಣೆ ಮಾಡದಿದ್ದರೆ ನಮ್ಮ ಪೆÇೀಷಕರಿಗೆ ನಮಗೆ ದಯಾಮರಣ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ನಮ್ಮ ಕುಟುಂಬದ ಪರಿಸ್ಥಿತಿ ಪರಿಗಣಿಸಿ ವರ್ಗಾವಣೆ ಮಾಡಬೇಕು ಎಂದು ನೊಂದ ಪೆÇಲೀಸ್ ಸಿಬ್ಬಂದಿ
ರಾಷ್ಟ್ರಪತಿ ದ್ರೌಪದಿ ಮುರ್ಮ ಹಾಗೂ ರಾಜ್ಯಪಾಲರಿಗೂ ದಯಾಮರಣಕ್ಕಾಗಿ ಮನವಿ ಸಲ್ಲಿಸಿದ್ದಾರೆ.