ವರ್ಗಾವಣೆ ಪೂರ್ವ ಆಯುಕ್ತ ಗುರುಲಿಂಗಪ್ಪರನ್ನು ಸುತ್ತಿಕೊಂಡ ವಿವಾದ

ರಾಯಚೂರು.ಮೇ.೧೪- ನಗರಸಭೆಗೆ ಆಯುಕ್ತರಾಗಿ ಗುರುಲಿಂಗಪ್ಪ ಅವರ ವರ್ಗಾವಣೆ ಆದೇಶ ಬರುವ ಪೂರ್ವ ಶಹಾಬಾದ್‌ನ ನಗರಸಭೆ ಕಛೇರಿಯಲ್ಲಿ ೪೦ ಸಾವಿರ ರೂ. ಮತ್ತೊಬ್ಬರಿಗೆ ಮರಳಿಸುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.
ಏ.೩೦ ರಂದು ತೆರವಾದ ಆಯುಕ್ತರ ಸ್ಥಾನಕ್ಕೆ ಗುರುಲಿಂಗಪ್ಪ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಇದಕ್ಕೂ ಪೂರ್ವ ಮಂಜುನಾಥ ಡೊಂಬರ್ ಅವರನ್ನು ವರ್ಗಾಯಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಈ ವರ್ಗಾವಣೆ ರದ್ದು ಪಡಿಸಿ, ಮೇ.೧೩ ರಂದು ಗುರುಲಿಂಗಪ್ಪ ಅವರನ್ನು ಶಹಾಬಾದ್‌ನಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ರಾಯಚೂರಿಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿ ಅಧಿಕೃತ ಆದೇಶ ನಿನ್ನೆ ಲಭ್ಯವಾಗಿದೆ. ಆದರೆ, ಈ ಆದೇಶ ಬರುವ ಪೂರ್ವದಲ್ಲಿಯೇ ಅವರು ಶಹಾಬಾದ್ ಕಛೇರಿಯಲ್ಲಿ ಹಣದ ವ್ಯವಹಾರಕ್ಕೆ ಸಂಬಂಧಿಸಿ ಸಂಭಾಷಿಸುತ್ತಿರುವುದು ಮತ್ತು ೪೦ ಸಾವಿರ ಹಣ ತಮ್ಮ ಪ್ಯಾಂಟ್ ಜೇಬಿನಿಂದ ಹಣ ತೆಗೆದು ಕೊಡುತ್ತಿರುವ ವಿಡಿಯೋ ಈಗ ವೈರಲ್ ಆಗಿ ಮಾರ್ಪಟ್ಟಿದೆ.
ಈ ವಿಡಿಯೋದಲ್ಲಿ ಹಣ ಮರಳಿಸಿದ್ದ ಘಟನೆಗೆ ಸಂಬಂಧಿಸಿ ನಿಮಗೆ ಪಾಪ ಬರುತ್ತದೆ ಎಂದು ಗುರುಲಿಂಗಪ್ಪ ಹೇಳುವುದು ಇದಕ್ಕೆ ಪ್ರತಿಯಾಗಿ ನಮಗೇಕೆ ಪಾಪಾ ಬರುತ್ತದೆ ಸರ್, ನಾವೇನು ಬೇನಾಮಿ ಹಣ ಅಲ್ಲ. ನಾವು ದುಡಿದ ಹಣ ಎಂದು ಹೇಳುವ ಮೂಲಕ ಅಲ್ಲಿಂದ ಹೊರಗೆದ್ದು ನಡೆಯುತ್ತಾರೆ. ಇದು ನಿನ್ನೆ ಮುಂಜಾನೆಯಿಂದ ಈ ವಿಡಿಯೋ ನಗರದ ಅನೇಕ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ. ಈ ವಿವಾದದ ನಂತರ ಗುರುಲಿಂಗಪ್ಪ ಅವರು ನಗರಸಭೆಗೆ ಆಗಮಿಸುವತ್ತ ಪರಿಸ್ಥಿತಿ ನಿರ್ಮಾಣವಾಗಿದೆ.