
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೫: ವರ್ಗಾವಣೆ ದಂಧೆ ನಮ್ಮ ಸರ್ಕಾರದಲ್ಲಿ ನಡೆಯೋದಿಲ್ಲ, ಸಿಎಂ ಅವರು ಈಗಾಗಲೇ ಏನಾದರು ದಾಖಲೆ ಇದ್ದರೆ ಕೊಡಿ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿಕೆ ನೀಡಿದ್ದಾರೆ..ದಾವಣಗೆರೆ ಜಿಲ್ಲೆ ಹರಿಹರದ ರಾಜನಹಳ್ಳಿ ವಾಲ್ಮೀಕಿ ಮಠಕ್ಕೆ ಆಗಮಿಸಿದ್ದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆಯ ಬಾಂಬ್ ವಿಚಾರ ಮಾತನಾಡಿದ್ದು, ವರ್ಗಾವಣೆ ದಂಧೆ ನಡೆಯುತ್ತಿಲ್ಲ, ದಾಖಲೆ ಇದ್ದರೆ ಒದಗಿಸಲಿ, ಪೆನ್ ಡ್ರೈವ್ ವಿಚಾರ ಕುಮಾರಸ್ವಾಮಿಗೆ ಕೇಳಿ ಎಂದು ಎಚ್ ಕೆ ಪಾಟೀಲ್ ತಿಳಿಸಿದ್ದಾರೆ..ಲೊಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಮಾತನಾಡಿದ ಅವರು, ಲೊಕಸಭಾ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ, ಬಿಜೆಪಿ-ಜೆಡಿಎಸ್ ನವರೆ ಬಡಿದಾಡುತಿದ್ದಾರೆ, ಅವರು ಹೊಂದಾಣಿಕೆ ಆಗ್ತಾರೆ ಅಂತ ಹೇಗೆ ಹೇಳ್ತಿರಿ, ಅದರ ಬಗ್ಗೆ ಈಗಲೇ ಮಾತನಾಡೋದು ತಪ್ಪಾಗುತ್ತೆ ಎಂದರು..ಆರ್ ಎಸ್ ಎಸ್ ಗೆ ನೀಡಿದ ಜಮೀನು ಹಿಂತೆಗೆದುಕೊಳ್ಳುವ ವಿಚಾರ ಮಾತನಾಡಿದ ಅವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಇದನ್ನ ಸಂಬಂಧಪಟ್ಟ ಸಚಿವರ ಹತ್ತಿರ ಕೇಳಿ ಅವರೆ ಹೇಳ್ತಾರೆ, ಗೊತ್ತಿಲ್ಲದೆ ಆ ಬಗ್ಗೆ ನಾನು ಮಾತನಾಡೋದು ತಪ್ಪಾಗುತ್ತೆ ಎಂದರು.ರಾಜ್ಯದಲ್ಲಿ ಬೆಲೆ ಏರಿಕೆ ವಿಚಾರ ಮಾತನಾಡಿದ ಅವರು, ಬೆಲೆ ಏರಿ ಮಾಡಿದ್ದು ನಾವಲ್ಲ ಕೇಂದ್ರ ಸರ್ಕಾರದವರು, ನಾವೆಲ್ಲೂ ಬೆಲೆ ಕಡಿಮೆ ಮಾಡುತ್ತೇವೆ ಅಂತ ಹೇಳಿಲ್ಲ ಎಂದು ತಿಳಿಸಿದ್ದಾರೆ..ವ್ಯಾಜ್ಯ ನಿರ್ವಹಣೆ ಕಾನೂನು ಜಾರಿರಾಜ್ಯದಲ್ಲಿ ವ್ಯಾಜ್ಯ ನಿರ್ವಹಣೆ ಕಾನೂನು ಜಾರಿಗೆ ತರುತ್ತಿದ್ದೇವೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ..ಬಡವರ ಪ್ರಕರಣಗಳು ಕೋರ್ಟ್ ನಲ್ಲಿ ತಡವಾಗುತ್ತೀವೆ, ಇವುಗಳೂ ಕೋರ್ಟ್ ನಲ್ಲಿ ಬೇಗ ಇತ್ಯರ್ಥ ಆಗಬೇಕು, ಈ ಬಗ್ಗೆ ಬೇಗ ಇತ್ಯರ್ಥ ಪಡಿಸುವ ಕಾನೂನು ಜಾರಿಗೆ ತರುವ ಚಿಂತನೆ ಇದೆ, ನಾವು ಆದಷ್ಟು ಬೇಗ ಈ ಕಾನೂನು ಜಾರಿ ಮಾಡ್ತೇವೆ ಎಂದರು.