ವರ್ಗಾವಣೆಯಾದ ಸಿಪಿಐ ಅಂಬಾರಾಯ ಕಮಾನಮನಿ ಬೀಳ್ಕೊಡುಗೆ

ಚಿಂಚೋಳಿ,ಜ.31: ಚಿಂಚೋಳಿಯಿಂದ ಬೆಂಗಳೂರಿಗೆ ವರ್ಗಾವಣೆಯಾದ ಸಿಪಿಐ ಅಂಬಾರಾಯ ಕಮಾನಮನಿ ಅವರಿಗೆ ಚಿಂಚೋಳಿ ಪೆÇಲೀಸ್ ಠಾಣೆವತಿಯಿಂದ ಬೀಳ್ಕೊಡುಗೆ ಹಮ್ಮಿಕೊಳ್ಳಲಾಯಿತು.ಸನ್ಮಾನ ಸ್ವೀಕರಿಸಿದ ಸಿಪಿಐ ಅಂಬಾರಾಯ ಕಮಾನಮನಿ, ಅವರು ಮಾತನಾಡಿ ನಾನು ಸೇವೆಗೆ ನೇಮಕವಾಗಿ 20 ವರ್ಷವಾಯಿತು.ಚಿಂಚೋಳಿ ತಾಲೂಕಿನಲ್ಲಿ ಒಂದು ವರ್ಷ 1 ತಿಂಗಳ ಕಾಲ ಕೆಲಸವನ್ನು ಮಾಡಿದ್ದೇನೆ. ಚಿಂಚೋಳಿ ತಾಲೂಕಿನಲ್ಲಿ ಎಲ್ಲಾ ಸಾರ್ವಜನಿಕರು, ರಾಜಕೀಯ ಮುಖಂಡರು ನನಗೆ ಒಳ್ಳೆಯ ಸಹಕಾರ ನೀಡಿದ್ದಾರೆ ಅವರಿಗೆ ಧನ್ಯವಾದಗಳು ಎಂದರು. ಕಾರ್ಯಕ್ರಮದಲ್ಲಿ ಕಲ್ಬುರ್ಗಿಯ ಐ. ಎಸ್ ಡಿ, ಡಿಎಸ್‍ಪಿ ಕೆ.ಬಸವರಾಜ, ಚಿಂಚೋಳಿ ಡಿಎಸ್‍ಪಿ ಸಂಗವiನಾಥ ಹಿರೇಮಠ್, ಸುಲೇಪೇಟ್ ಸಿಪಿಐ ರಾಘವೇಂದ್ರ, ಅಬಕಾರಿ ಇಲಾಖೆ ಸಿಪಿಐ ಜಟ್ಟಪ್ಪ ಬೆಲೂರ, ಡಾ. ಸಂತೋಷ್ ಪಾಟೀಲ್, ಡಾ. ಬಾಲಾಜಿ ಪಾಟೀಲ್, ಚಿಂಚೋಳಿ ಪಿಎಸ್ ಐ ಹನುಮಂತ, ಮಿರಿಯಾಣ ಪಿಎಸ್‍ಐ ಐ.ಎಸ್. ಪಟೇಲ್, ಚಿಂಚೋಳಿಯ ವಿವಿಧ ರಾಜಕೀಯ ಪಕ್ಷದ ಮುಖಂಡರು ಹಾಗೂ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು