ವರ್ಗಾವಣೆಗೊಂಡ ಶಿಕ್ಷಕರಾದ ಸಿದ್ದಪ್ಪ, ಗೀತಾಗೆ ಆತ್ಮೀಯ ಬಿಳ್ಕೋಡುಗೆ

ಮಾನ್ವಿ.ಡಿ.೨೪- ತಾಲ್ಲೂಕಿನ ಪೋತ್ನಾಳ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿಯಲ್ಲಿ ಬೇರೆ ಬೇರೆ ಜಿಲ್ಲೆಗೆ ಮತ್ತು ತಾಲೂಕಿಗೆ ವರ್ಗಾವಣೆ ಆದ ಪ್ರಯುಕ್ತ ಸಿದ್ದಪ್ಪ ಹಾಗೂ ಶ್ರೀಮತಿ ಗೀತಾ ನಡುವಿನ ಮನೆ ಈ ಇಬ್ಬರನ್ನು ಆತ್ಮೀಯವಾಗಿ ಬಿಳ್ಕೋಟ್ಟರು.
ಈ ಸಂದರ್ಭದಲ್ಲಿ ಬಿಳ್ಕೋಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಅಧ್ಯಕ್ಷರಾದ ಅನ್ನಪೂರ್ಣಮ್ಮರವರು ಮಾತನಾಡಿ ನಮ್ಮ ಶಾಲೆಯಲ್ಲಿ ಸುಮಾರು ವರ್ಷಗಳ ಕಾಲ ಶ್ರೀ ಮತಿ ಗೀತಾ ಮೇಡಮ್ ಅವರು ಈ ಶಾಲೆಯ ಮುಖ್ಯಗುರುಗಳು ಆಗಿದ್ದಂತಹ ಶ್ರೀ ಸಿದ್ದಪ್ಪ ಸರ್ ರವರು ಬಹಳ ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡಿದ್ದರು, ಅವರಿದ್ದಂತಹ ಸಂದರ್ಭದಲ್ಲಿ ಬಹಳ ಅಚ್ಚುಕಟ್ಟಾಗಿ ಮತ್ತು ಮಕ್ಕಳಿಗೆ ಶಿಸ್ತು ಕಾಪಾಡಬೇಕೆಂದು ಕಟ್ಟು-ನಿಟ್ಟಿನಲ್ಲಿ ಮಕ್ಕಳಿಗೆ ಕಲಿಸಿಕೊಟ್ಟಿದ್ದರು,
ಇನ್ನೋರ್ವ ಸಹ ಶಿಕ್ಷಕ ಖಲೀಲ್ ರವರು ಮಾತನಾಡಿ ನಮ್ಮ ಆತ್ಮೀಯ ಸಿದ್ದಪ್ಪ ರವರ ಸೇವೆ ಶ್ಲಾಘನೀಯ ಹಾಗೂ ಅವರು ಸಿಂಧನೂರ್ ಗೆ ವರ್ಗಾವಣೆ ಆದ್ದರಿಂದ ಅವರು ಎಲ್ಲೇ ಇದ್ದರೂ ಅವರ ಜೀವನ ಸುಖ ಶಾಂತಿ ನೆಮ್ಮದಿಯಿಂದ ಜೀವನ ಸಾಗುವುದರ ಮುಖಾಂತರ ಅವರು ಅಲ್ಲಿನ ಮಕ್ಕಳಿಗೂ ಕೂಡ ಉತ್ತಮ ಶಿಕ್ಷಣ ಕೊಡಲಿ, ವರ್ಗಾವಣೆ ಆದ ಶಿಕ್ಷಕರಾದ ಗೀತಾ ನಡುವನಿ ಮನೆ ಹಾಗೂ ಮಖ್ಯಗುರು ಸಿದ್ದಪ್ಪರವರು ಶಾಲೆಯ ಸಿಹಿಕಹಿ ನೆನಪುಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ವಲಯದ ಸಿಆರ್‌ಪಿ ಲಕ್ಷ್ಮೀ ಕಾಂತ, ನಿವೃತ್ತಿ ಮುಖ್ಯಗುರು ಭೀಮಣ್ಣ ಉಧ್ಬಾಳ್, ದೇವಿಪುರದ ಮುಖ್ಯಗುರು ಗುಂಡಯ್ಯ ನಾಯಕ್, ಖರಾಬ್ ದಿನ್ನಿಯ ಮುಖ್ಯ ಗುರು ಚಂದ್ರಶೇಖರ, ಪಂಚಾಯತ ಹಿಂದುಗಡೆ ಶಾಲೆಯ ಮುಖ್ಯ ಗುರು ನಾನ ಗೌಡ ಪಾಟೀಲ್, ವಲ್ಕಂದಿನ್ನಿಯ ಶಿಕ್ಷಕ ಬಸವರಾಜ್ ಪತ್ರಕರ್ತ ಅಶೋಕ ತಡಕಲ್, ಅದೇ ಶಾಲೆಯ ಶಿಕ್ಷಕಿ, ಗೀತಾ ಮಳ್ಳಿ,ಶ್ರೀಮತಿ ಛಾಯರಾಣಿ, ದೇವಿಪುರದ ಲಕ್ಷ್ಮೀ ಟೀಚರ್, ಅತಿಥಿ ಶಿಕ್ಷಕರಾದ ನೀಲಗಂಗಮ್ಮ ಸೇರಿದಂತೆ ಅನೇಕರು ಇದ್ದರು. ಗೀತಾ ಮಳ್ಳಿರವರು ನೀರೂಪಿಸಿದರೆ ಮುಖ್ಯ ಗುರು ವಿಮಲಾ ವಂದಿಸಿದರು.