ಮಾನ್ವಿ.ಅ.೦೮- ತಾಲೂಕಿನ ಮಲ್ಲದಗುಡ್ಡ ಗ್ರಾಮದಲ್ಲಿನ ಸರಕಾರಿ ಕನ್ನಡ ಮತ್ತು ಇಂಗ್ಲೀಷ ಮಾಧ್ಯಮ ಉನ್ನತಿಕರಿಸಿದ ಮಾದರಿ ಪ್ರಾಥಮಿಕ ಮತ್ತು ಫ್ರೌಡಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸುರೇಶ, ದೇವಪ್ಪ, ಗುರಪ್ಪ ಶಿಕ್ಷಕರನ್ನು ಗ್ರಾಮಸ್ಥರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಶ್ರೀ ಆರೂಢ ಅಯ್ಯಪ್ಪತಾತಾನವರು, ಬಸವನಗೌಡ, ವೀರೇಶ ಸಜ್ಜನ, ಯರಿಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.