
ದಾವಣಗೆರೆ.ಮೇ.೧೨: ರಾಜ್ಯದ ಭೂಪಟವನ್ನು ಗಮನಿಸಿದರೆ ಭೌಗೋಳಿಕ ಸ್ಥಾನದಲ್ಲಿ ಕರ್ನಾಟಕದ ಮಧ್ಯದಲ್ಲಿ ಇದ್ದು, ದಾವಣಗೆರೆ ಜಿಲ್ಲೆಯು ರಾಜ್ಯದ ಜಿಲ್ಲಾ ರಾಜ್ಯಧಾನಿ ಆಗಬೇಕಿತ್ತು. ದಾವಣಗೆರೆಗೆ ಆಗಮಿಸಿದಾಗ ರಾಜ್ಯದ ಭೂಪಟವನ್ನು ನೋಡಿದಾಗ ನನಗೆ ಅನಿಸಿತ್ತು ಎಂದು ದಾವಣಗೆರೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ ನಾಯಕ ತಿಳಿಸಿದರು.ದಾವಣಗೆರೆಯ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಗೆ ವರ್ಗವಾಗಿ ಬಂದಾಗ ಕೋವಿಡ್ ಸೋಂಕು ಇದ್ದ ಕಾರಣ ಸುಮಾರು ಒಂದು ವರ್ಷಗಳ ಕಾಲ ಯಾವ ವಕೀಲರನ್ನು ಗಮನಿಸಲಾಗಲಿಲ್ಲ. ನಂತರದ ದಿನಗಳಲ್ಲಿ ನಾವೆಲ್ಲರೂ ಒಂದೇ ಮನೆಯ ಸದಸ್ಯರ ರೀತಿಯಲ್ಲಿ ನಡೆದುಕೊಂಡಿದ್ದೇವೆ ಎಂದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆಗಿ ಬಂದ ನಾನು ಬಹುತೇಕ ಕಾನೂನು ಸೇವಾ ಪ್ರಾಧಿಕಾರದಲ್ಲೇ ಇದ್ದ ಕಾರಣ ನ್ಯಾಯಾಲಯದಲ್ಲಿ ಕೆಲಸ ಮಾಡಲು ಆಗಿಲ್ಲ. ಆದರೂ ಸಹ ನನ್ನನ್ನು ಗುರುತಿಸಿ ನನ್ನ ಬಗ್ಗೆ ಅಭಿನಂದನೆಯ ಮಾತನಾಡಿದ್ದೀರಿ. ಈ ನೆನಪು ನನಗೆ ಚಿರಕಾಲ ಸ್ಮರಣೆಯಲ್ಲಿ ಇರುತ್ತದೆ ಎಂದು ಹೇಳಿದರು.ವರ್ಗಾವಣೆಗೊಂಡ ಮತ್ತೋರ್ವ ನ್ಯಾಯಾಧೀಶರಾದ ಪ್ರೀತಿ ಎಸ್ ಸದರಜೋಶಿ ಮಾತನಾಡಿ, ದಾವಣಗೆರೆ ಜಿಲ್ಲೆಯು ನನಗೆ ಹಲವಾರು ಅನುಭವಗಳನ್ನು ನೀಡಿದೆ. ಆ ಮೂಲಕ ನಾನು ಕೆಲವು ಕೆಲಸಗಳನ್ನು ಸಹ ಕಲಿತಿದ್ದೇನೆ.ಯಾವಾಗಲೂ ನಗುನಗುತ್ತಾ ಕಕ್ಷಿದಾರರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಸಾಗೋಣ. ಕಕ್ಷಿದಾರರ ಸಮಸ್ಯೆಗಳಿಗೆ ದನಿಯಾಗುವ ಮೂಲಕ ಎಲ್ಲರೂ ಒಗ್ಗಟ್ಟನಿಂದ ಸಾಗೋಣ ಎಂದರು.ವರ್ಗಾವಣೆಗೊಂಡ ನ್ಯಾಯಾಧೀಶರ ಕುರಿತಂತೆ ಹಿರಿಯ ವಕೀಲರಾದ ಡಿ.ಪಿ.ಬಸವರಾಜ್, ಲೋಕಿಕೆರೆ ಸಿದ್ದಪ್ಪ, ಎನ್.ಎಂ.ಆಂಜನೇಯ, ಲಕ್ಕಪ್ಪ, ರಜ್ವಿಖಾನ್, ಗುಮ್ಮನೂರು ಮಲ್ಲಿಕಾರ್ಜುನ್, ಎಸ್ ಪರಮೇಶ್ ಸೇರಿದಂತೆ ಇತರರು ಮಾತನಾಡಿದರು.ವೇದಿಕೆಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರವೀಣ್ ಕುಮಾರ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ್, 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಝೀಯಾ ಕೌಸರ್ ಆಗಮಿಸಲಿದ್ದು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್.ಅರುಣ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು.