ವರ್ಗಾವಣೆಗೊಂಡ ಕಣೇಕಲ್ ಸರಕಾರಿ ಶಾಲಾ ಶಿಕ್ಷಕ ಶೇಷಗಿರಿಗೆ ಸನ್ಮಾನ

ಸೈದಾಪುರ:ಸೆ.24:ವರ್ಗಾವಣೆಗೊಂಡ ಶಿಕ್ಷಕ ಶೇಷಗಿರಿ ವಿದ್ಯಾರ್ಥಿಗಳ ಬಗಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ಪ್ರಾಥಮಿಕ ಹಂತದ ನಂತರ ಪ್ರೌಢ ಶಿಕ್ಷಣವನ್ನು ಮುಂದುವರೆಸುಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವು ನೀಡಿ ಕಲಿಕೆಯ ಅಪವ್ಯಯ ತಪ್ಪಿಸಿ ದಾಖಲಾತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರು ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯ ವತಿಯಿಂದ ಕಣೇಕಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಅಂತರ ಜಿಲ್ಲೆಗೆ ವರ್ಗಾವಣೆಯಾದ ಶಿಕ್ಷಕ ಶೇಷಗಿರಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಇಂಗ್ಲೀಷ ವಿಷಯ ಬೋದಕರಾದ ಅವರು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದರೂ. 15 ವರ್ಷಕ್ಕೂ ಹೆಚ್ಚಿನ ದಿನಗಳಿಂದ ನಮ್ಮ ಸಂಸ್ಥೆಯ ಬಗಗೆ ಅಪಾರ ಅಭಿಮಾನ ಹೊಂದಿದ್ದ ಅವರು ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ತಮ್ಮದಾಗಿಸಿಕೊಂಡಿದ್ದರು. ಅವರ ಉತ್ತಮ ಬೋದನೆ ನಮ್ಮಲ್ಲಿ ಬರುವ ವಿದ್ಯಾರ್ಥಿಗಳ ಒಳ್ಳೆಯ ಸಾಧನೆಗೆ ನೆರವಾಗಿತ್ತು. ಮುಂದಿನ ದಿನಗಳಲ್ಲಿಯೂ ತಾವು ಕಾರ್ಯ ಮಾಡುವ ಪ್ರದೇಶಲ್ಲಿ ಉತ್ತಮ ಸಾಧನೆ ನಿಮ್ಮದಾಗಲಿ ಎಂದು ಹಾರೈಸಿದರು.

ವರ್ಗಾವಣೆಗೊಂಡ ಶಿಕ್ಷಕ ಶೇಷಗಿರಿ, ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಶಿಕ್ಷಕರಾದ ಗೂಳಪ್ಪ.ಎಸ್.ಮಲ್ಹಾರ, ರಾಚಯ್ಯ ಸ್ವಾಮಿ ಬಾಡಿಯಾಲ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ, ಉಪನ್ಯಾಸಕ ದೇವಿಂದ್ರ ಪೀರಾ, ಭೀಮಣ್ಣ, ಸತೀಶ ಪುರ್ಮಾಂ, ಸಂಗಾರೆಡ್ಡಿ, ರಾಚಪ್ಪ ಸೇರಿದಂತೆ ಇತರರಿದ್ದರು.