ವರುಣಾ ಕ್ಷೇತ್ರ ಸಿದ್ದರಾಮಯ್ಯಗೆ ಶ್ರೀರಕ್ಷೆಯಾಗಿದೆ

ಕೋಲಾರ,ಮಾ,೨೭- ಮಾಜಿ ಮುಖ್ಯ ಮಂತ್ರಿ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ವರ್ಧಿಸುವ ವರುಣಾ ಕ್ಷೇತ್ರವು ಶ್ರೀರಕ್ಷೆಯಾಗಿದೆ ಎಂದು ಎ.ಐ.ಸಿ.ಸಿ. ನಿರ್ಧರಿಸಿ ಟಿಕೆಟ್ ಘೋಷಿಸುವ ಮೂಲಕ ಊಹಪೋಹಗಳಿಗೆ ಅಂತಿಮ ತೆರೆ ಬಿದ್ದಿದ್ದರೂ ಸಹ ಮೊದಲ ಪಟ್ಟಿಯ ೧೨೪ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯ ಹೆಸರನ್ನು ಬಿಡುಗಡೆ ಮಾಡಿದ್ದು, ಕೋಲಾರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯ ಟಿಕೆಟ್ ಘೋಷಣೆಯಾಗದೆ ಇರುವುದು ಭಾರಿ ಕುತೂಹಲ ಮೋಡಿಸಿದೆ.


ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆ ೨೦೨೩ಕ್ಕೆ ಕಾಂಗ್ರೇಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಅಗಿದ್ದು ೧೨೪ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಅದರೆ ಇದರ ನಡುವೆ ಹಲವು ಕ್ಷೇತ್ರಗಳ ಕುರಿತು ಕುತೂಹಲಕಾರಿಯಾಗಿ ಉಳಿದಿದೆ.
ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡುವ ಮೂಲಕ ಕೋಲಾರ ಮತ್ತು ಬಾದಮಿ ವಿಧಾನ ಸಭಾ ಕ್ಷೇತ್ರಗಳಿಗೆ ಟಿಕೆಟ್ ಯಾರಿಗೂ ನೀಡದೆ ಕಾದಿರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅದರೆ ಈ ಹಿಂದೆ ಸ್ವರ್ಧಿಸುತ್ತೇನೆ ಎಂದು ಘೋಷಿಸಿದ್ದ ಕೋಲಾರ ವಿಧಾನ ಸಭಾ ಕ್ಷೇತ್ರದ ಜೂತೆಗೆ ಹಾಲಿ ಶಾಸಕರಾಗಿದ್ದ ಬಾದಮಿ ವಿಧಾನಸಭಾ ಕ್ಷೇತ್ರದಲ್ಲೂ ಸಹ ಅಭ್ಯರ್ಥಿಗಳ ಹೆಸರನ್ನು ಇನ್ನ ಘೋಷಿಸದೆ ಇರುವುದು ಸಿದ್ದರಾಮಯ್ಯ ಅವರಿಗೆ ಎರಡು ಕಡೆ ವಿಧಾನ ಸಭಾ ಕ್ಷೇತ್ರಗಳಿಗೆ ಅವಕಾಶ ಕಲ್ಪಿಸುವಂತ ತಂತ್ರಗಾರಿಕೆ ಇರಬಹುದು ಎಂದು ಶಂಕಿಸಲಾಗಿದೆ.
ಈಗಲೇ ಸಿದ್ದರಾಮಯ್ಯ ಅವರಿಗೆ ಎರಡು ಕಡೆ ಅವಕಾಶ ನೀಡಿದಲ್ಲಿ ಉಳಿದವರು ಸಹ ಎರಡು ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲು ಹೈಕಮಾಂಡ್ ಮೇಲೆ ಒತ್ತಾಯಿಸ ಬಹುದು ಎಂಬ ಹಿನ್ನಲೆಯಲ್ಲಿ ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಸಿದ್ದರಾಮಯ್ಯ ಅವರ ಹೆಸರನ್ನು ಘೋಷಿಸದೆ ಕಾದಿರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ವರುಣಾ ಮತ್ತು ಕೋಲಾರ ವಿಧಾನ ಸಭಾ ಕ್ಷೇತ್ರ ಎರಡರಲ್ಲೂ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಗೆಲವು ಸಾಧಿಸಿದಲ್ಲಿ ವರುಣಾ ಕ್ಷೇತ್ರಕ್ಕೆ ರಾಜಿನಾಮೆ ಸಲ್ಲಿಸಿ ತಮ್ಮ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪಚುನಾವಣೆಯಲ್ಲಿ ಟಿಕೆಟ್ ನೀಡಬಹುದಾಗಿದೆ. ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಸೋತರೇ ವರುಣಾ ಕ್ಷೇತ್ರದ ಉಸ್ತುವಾರಿಯನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೀಡಿ ತಾವು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸ ಬಹುದು. ಅಧಿಕಾರಕ್ಕೆ ಬಂದಲ್ಲಿ ಮುಖ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಅನುಕೊಲಕರವಾಗಲಿದೆ ಎಂಬ ಉದ್ದೇಶವನ್ನು ಸಿದ್ದರಾಮಯ್ಯ ಹೊಂದಿದ್ದಾರೆ ಎನ್ನಲಾಗಿದೆ.
ಕ್ಷೇತ್ರ ಪುನರ್ ವಿಂಗಡನೆ ನಂತರ ಅಸ್ಥಿತ್ವಕ್ಕೆ ಬಂದಿದ್ದ ವರುಣಾ ಕ್ಷೇತ್ರ ವಿಧಾನ ಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಮೊದಲ ಭಾರಿ ಸ್ವರ್ಧಿಸಿದಾಗ ಭಾರಿ ಅಂತರದಿಂದ ಜಯಗಳಿಸಿ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಹೊಂದಿದ್ದರು, ನಂತರದಲ್ಲಿ ಎರಡನೇ ಭಾರಿಯು ಇದೇ ಕ್ಷೇತ್ರದಿಂದ ಆಯ್ಕೆಯಾದ ಸಂದರ್ಭದಲ್ಲಿ ಮುಖ್ಯ ಮಂತ್ರಿಯ ಸ್ಥಾನವನ್ನು ಅಲಂಕರಿಸಿದ್ದರು,
ಒಂದು ಅವಧಿಯ ನಂತರದಲ್ಲಿ (ಬಾದಮಿ) ಮತ್ತೆ ಸ್ವಕ್ಷೇತ್ರವಾದ ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಮರಳಿ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಹಾಲಿ ಕ್ಷೇತ್ರವನ್ನು ತಂದೆಗಾಗಿ ತ್ಯಾಗ ಮಾಡಿದಂತಾಗಿದೆ.
ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಟಿಕೆಟ್ ಘೋಷಣೆಯಾಗಿ ಚುನಾವಣೆಯಲ್ಲಿ ಎರಡು ಕಡೆ ಜಯ ಬೇರಿ ಬಾರಿಸಿದಲ್ಲಿ ವರುಣಾ ಕ್ಷೇತ್ರದಲ್ಲಿ ತಂದೆಯ ಪರವಾಗಿ ಮುಕಟವಿಲ್ಲದ ಮಹಾರಾಜರಂತೆ ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಬಾಕ್ಸ್-
ಈಗಾಗಲೇ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಕೆ.ಹೆಚ್.ಮುನಿಯಪ್ಪ ಅವರ ಭೀತಿ ಇರುವುದನ್ನು ದೂರ ಮಾಡುವ ದೆಸೆಯಲ್ಲಿ ಕೆ.ಹೆಚ್.ಮುನಿಯಪ್ಪ ಅವರ ದಿಕ್ಕು ತಪ್ಪಿಸಲೆಂದೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಕೆ.ಹೆಚ್.ಮುನಿಯಪ್ಪ ಅವರು ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷವು ಆಡಳಿತಕ್ಕೆ ಬರುವುದು ಕಷ್ಟ ಸಾಧ್ಯ. ಕನಿಷ್ಟ ರಾಜ್ಯದ ರಾಜಕಾರಣದಲ್ಲಿ ತಮ್ಮ ಕೈ ಚಳಕವನ್ನು ಪ್ರದರ್ಶಿಸಲು ದೇವನಹಳ್ಳಿಯಿಂದ ಸ್ವರ್ಧಿಸಲು ಸಮ್ಮತಿಸಿದ್ದಾರೆ.