ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆಗೊಳ್ಳುತ್ತಿದೆ

ತಿ.ನರಸೀಪುರ.ಜ.10- ಜಾತ್ಯಾತೀತ ಜನತಾದಳದ ತತ್ವ ಹಾಗು ಸಿದ್ದಾಂತಗಳನ್ನು ಮೆಚ್ಚಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಪಕ್ಷ ಸೇರ್ಪಡೆಗೊಳ್ಳುತ್ತಿದ್ದು ಜೆಡಿಎಸ್ ವರುಣಾ ಕ್ಷೇತ್ರದಲ್ಲಿ ಬಲವರ್ಧನೆಗೊಳ್ಳುತ್ತಿದೆ ಎಂದು ವರುಣಾ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ತಾಯೂರು ಪ್ರಕಾಶ್ ಹೇಳಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡ ವರುಣಾ ಮತ ಕ್ಷೇತ್ರದ ತಿರುಮ ಕೂಡಲು ಗ್ರಾಮದ ನಾಯಕ ಹಾಗು ಒಕ್ಕಲಿಗ ಸಮುದಾಯದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹಾಗು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಡಳಿತ ಕಾರ್ಯ ವೈಖರಿಯನ್ನು ಮೆಚ್ಚಿ ಹಾಗು ತಮ್ಮ ಪಕ್ಷದ ಮುಖಂಡರ ನಡೆಯಿಂದ ಬೇಸತ್ತು ಹಲವಾರು ಮುಖಂಡರು ನಮ್ಮ ಪಕ್ಷ ಸೇರ್ಪಡೆಗೊಳ್ಳುತ್ತಿದ್ದು ಅವರನ್ನು ಗೌರವ ಪೂರ್ವಕವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತಿದೆ.ಅವಕಾಶ ಇದ್ದಲ್ಲಿ ಇವರಿಗೆ ಜೆಡಿಎಸ್ ನಲ್ಲಿ ಸೂಕ್ತ ಸ್ಥಾನ ಮಾನ ದೊರಕಿಸಿಕೊಡಲು ಪ್ರಯತ್ನಿ ಸಲಾಗುವುದು ಎಂದರು.
ಗ್ರಾ.ಪಂ.ಚುನಾವಣೆಯ ನಂತರ ಜೆಡಿಎಸ್ ಪಕ್ಷಕ್ಕೆ ವಿವಿಧ ಪಕ್ಷಗಳ ಮುಖಂಡರು ಹಾಗು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಈ ಬೆಳವಣಿಗೆ ಮುಖ್ಯ ಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಯವರ ಸರಳತೆ ಹಾಗು ಜನ ಪರ ಆಡಳಿತ ವೈಖರಿಗೆ ಸಿಕ್ಕ ಮನ್ನಣೆಯಾಗಿದೆ.ಮಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಇದೇ ವೇಳೆ ತಿರುಮಕೂಡಲು ಗ್ರಾಮದ ಅಭಿಷೇಕ್, ಮಂಜೇಶ್.ಆರ್.ರೋಹಿತ್, ಕಾರ್ತಿಕ್, ಅಭಿಷೇಕ್ ಗೌಡ, ಎಸ್.ಶಂಕರ್, ದರ್ಶನ್, ಮನು, ಮಂಜುನಾಥ್, ಮಹೇಶ್, ಸಿದ್ದು, ಕಿರಣ್, ಸುಮನ್ ಗೌಡ, ಯಶ್ವಂತ್, ಸಾಗರ್, ಸುಜನ್, ಸುಮಂತ್, ಸುರೇಶ್, ಲೋಹಿತ್, ಅಭಿಷೇಕ್ ಸೇರಿದಂತೆ ಮತ್ತಿತರರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.