ವರುಣಾ-ಕೋಲಾರ ಎರಡು ಕಡೆ ಸ್ಪರ್ಧಿಸುವೆ-ಸಿದ್ದರಾಮಯ್ಯ

ಕೋಲಾರ,ಏ,2-ವರುಣಾ ಮತ್ತು ಕೋಲಾರ ಎರಡು ಕಡೆ ಸ್ಪರ್ಧೆ ಮಾಡುತ್ತೇನೆ. ಆದರೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಅದಕ್ಕೆ ಬದ್ದ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಏ.೯ರಂದು ಕೋಲಾರದಲ್ಲಿ ನಡೆಯುವ ‘ಜೈ ಭಾರತ್ ಕಾರ್ಯಕ್ರಮದ ಪೂರ್ವಭಾವಿ ಸಭೆಯ ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ವರುಣಾ ಸ್ವಕ್ಷೇತ್ರ, ಕೊನೆ ಚುನಾವಣೆಯಾಗಿದ್ದು, ವರುಣಾ ಕ್ಷೇತ್ರದಿಂದ ರಾಜಕೀಯ ಆರಂಭವಾಗಿದ್ದು, ತಾಲೂಕು ಬೋರ್ಡ್, ಶಾಸಕ ಸ್ಥಾನಕ್ಕೆ ಸ್ಪರ್ಧೆ, ಲೋಕಸಭಾ ಸ್ಪರ್ಧೆ ಮಾಡಿದ್ದೇನೆ ಆದ್ದರಿಂದ ವರುಣಾದಲ್ಲಿ ನಿಲ್ಲುತ್ತಿದ್ದಾನೆ. ನನ್ನ ಜನ ನನ್ನ ಹುಟ್ಟು ಊರಿನಿಂದ ಸ್ಪರ್ಧೆಸಬೇಕು ಅನ್ನೋದು ನನ್ನ ಆಸೆ, ಎರಡು ಕಡೆಯಿಂದ ಅವಕಾಶ ಕೊಟ್ಟರೆ ನಿಲ್ಲುವೆ ಎಂದು ತಿಳಿಸಿದರು.
ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ಯಾರೇ ಬಂದರೂ ನಾನು ಸ್ಪರ್ಧೆ ಮಾಡುವೆ ಎಂದರಲ್ಲದೆ ಮನೆ ದೇವರು ಹೇಳಿದಂತೆ ಎರಡು ಕಡೆ ಸ್ಪರ್ಧೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಕೊಡದೆ ನುಣುಚಿಕೊಂಡ ಸಿದ್ಧರಾಮಯ್ಯ ವರುಣಾ, ಕೋಲಾರ ಮತ್ತು ರಾಜ್ಯದ ೨೫ ಕಡೆ ಜನ ಕರೆಯುತ್ತಿದ್ದಾರೆ ಎಂದು ತಿಳಿಸಿದರು.