ವರುಣನ ಕೃಪೆಗಾಗಿ ಇನ್ನಿಲ್ಲದ ಕಸರತ್ತು..! ಮಳೆಗಾಗಿ ಗೊಂಬೆ ಮದುವೆಗೆ ಮೊರೆ !

ಆಲಮಟ್ಟಿ: ಜೂ.29:ಮುಂಗಾರು ಹಂಗಾಮಿನ ಮೊದಲ ನೀರ ಹನಿಗಳ ಲೀಲೆ ಬಹುತೇಕ ಮಾಯವಾಗಿದೆ. ರೋಹಿಣಿ,ಮೃಗಶಿರ ಮಳೆ ಸಂಪೂರ್ಣವಾಗಿ ಇಲ್ಲಿ ಕೈಕೊಟ್ಟಿದೆ.ಇದರಿಂದ ರೈತಾಪಿ ಜನವಂತೂ ವಿಲವಿಲ ಒದ್ದಾಟ ಶುರು ಹಚ್ಚಿಕೊಂಡಿದ್ದಾರೆ. ನಿತ್ಯ ಅಗಸದಲ್ಲಿ ಚಲಿಸುವ ಮೋಡಗಳ ಸಂಚಲನ ನೋಡುತ್ತಾ ಉಸಿರು ಬಿಗಿ ಹಿಡಿದು ಮಳೆ ನಿರೀಕ್ಷೆಯಲ್ಲಿ ಕುಳಿತ್ತಿದ್ದಾರೆ. ಅಗಾಗ ಅಂಬರದಲ್ಲಿ ಕಪ್ರು ಮೊಡಗಳು ಆರ್ಭಟಿಸುತ್ತಾ ಓಡುತ್ತಿವೆ.ಆದರೆ ಧರೆಗೆ ಮಳೆ ಸುರಿಸುತ್ತಿಲ್ಲ.ಪರಿಣಾಮ ಆತಂಕದ ಕಾಮೋ9ಡ ಎಲ್ಲೆಡೆ ಆವರಿಸುತ್ತಿದೆ. ಜನತೆ ಮಳೆರಾಯನಿಗಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.
ಮುಂಗಾರು ಋತು ಪ್ರಾರಂಭವಾಗಿದೆ. ಆದರೆ ವರುಣ ಮಾತ್ರ ಇಲ್ಲಿ ಕಣ್ಣು ಮುಚ್ಚಾಲೆ ಆಟ ಯಥೇಚ್ಛವಾಗಿ ನಡೆಸಿ ನಿರಾಸೆ,ಆತಂಕ ಮೂಡಿಸುತ್ತಿದ್ದಾನೆ. ಅತ್ತ ವರುಣನ ಮುನಿಸಿಕೆಯ ಚೆಲ್ಲಾಟದಿಂದ ಇತ್ತ ಜನತೆ ಪ್ರಾಣ ಸಂಕಟಕ್ಕೀಡಾಗಿದ್ದಾರೆ. ಮಳೆಗಾಗಿ ಕೃಷ್ಣೆಯ ತೀರದಲ್ಲಿನ ಜನತೆ ಕಂಗಾಲಾಗಿ ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಜಿಲ್ಲೆಯಲ್ಲಿ ಗುಜಿ9 ಪೂಜೆ ಅವ್ಯಾಹತವಾಗಿ ನಡೆದಿವೆ. ಹೂತ ಶವ ಹೊರ ತಗೆದು ನೀರು ಹಾಕಲಾಗುತ್ತಿದೆ. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬ ಗಾಢ ನಂಬಿಕೆಯೂ ಜನತೆಯ ಮನದಲ್ಲಿ ಬೇರೂರಿದೆ. ಹೀಗಾಗಿ ಕತ್ತೆ,ಕಪ್ಪೆ,ಗೊಂಬೆಗಳ ಮದುವೆವೂ ಶಾಸ್ತ್ರೋಕ್ತವಾಗಿ ನೆರವೇರಿಸಿ ಮಳೆಗಾಗಿ ಮುಗಿಲಿನತ್ತ ನೋಟ ಬೀರಿದ್ದಾರೆ. ಆತ್ತ ನೋಡುವುದೇ ದಿನನಿತ್ಯದ ಕಾಯಕವಾಗಿದೆ. ಇದು ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಭೀಕರತೆಯ ಪರಿಸ್ಥಿತಿ ಎದ್ದು ತೋರಿಸುವಂತಿದೆ.
ಸಧ್ಯ ವಾಡಿಕೆಯಂತೆ ಮುಂಗಾರು ಪ್ರಾರಂಭವಾಗಿದೆ.ಅದು ಹೆಸರಿಗಷ್ಟೇ ಮುಂಗಾರು ಎಂಬಂತಾಗಿದೆ. ಮಳೆರಾಯ ಪರಿಪೂರ್ಣ ದರ್ಶನ ತೋರುತ್ತಿಲ್ಲ. ಯಾಕೋ ಏನೋ ಭೂವೋಡಲ್ಲಿನ ಮೇಲೆ ಮುನಿಸಿಕೊಂಡಿದ್ದಾನೆ. ಧರೆಯೊಡಲು ಹಸಿಹಸಿ ಕಾಣುತ್ತಿಲ್ಲ. ಸಕಲ ಜೀವರಾಶಿಗಳು ಚಿಂತಾಕ್ರಾಂತಗೊಂಡಿವೆ. ಪರಿಸ್ಥಿತಿ ಅಯ್ಯೋಮಯವಾಗುತ್ತಿದೆ. ಸಮರ್ಪಕವಾಗಿ ಮಳೆ ಬಾರದಿದ್ದರೆ ಗುಟುಕು ನೀರಿಗಾಗಿ ಹಾಹಾಕಾರ ಎದ್ದೇಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಆಹಾ ! ಗೊಂಬೆ ಮದುವೆ…
ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ
ಆಲಮಟ್ಟಿ ಗ್ರಾಮದಲ್ಲಿ ಮಳೆಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಮಹಿಳಾ ಘಟಕದ ವತಿಯಿಂದ ಗೊಂಬೆಗಳ ಮದುವೆ ಹಾಗೂ ಗುರ್ಜಿ ಆಡಿ, ಮಳೆಗಾಗಿ ಮಂಗಳವಾರ ಪ್ರಾರ್ಥಿಸಿದರು.
ವಿಜಯಪುರದಿಂದ ಹೆಣ್ಣು ಗೊಂಬೆ ತಂದ ಮಹಿಳೆಯರು ಹಾಗೂ ಆಲಮಟ್ಟಿಯಿಂದ ತಂದ ಗಂಡು ಗೊಂಬೆ ಇವರೆಡೂ ಗೊಂಬೆಗಳಿಗೆ ಶಿವ, ಪಾರ್ವತಿ ಎಂದು ನಾಮಕರಣ ಮಾಡಲಾಯಿತು.
ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಪಾಲಿಸಲಾಯಿತು. ಮದುವೆಯಲ್ಲಿ ಬಾಜಾ ಭಜಂತ್ರಿಯೂ ಇತ್ತು. ವಿಜಯಪುರದಿಂದ ಹೆಣ್ಣು ಗೊಂಬೆ ಸಮೇತ ಬಂದ ಮಹಿಳೆಯರನ್ನು ಬೀಗರು ಎಂದು ತಿಳಿದು, ಬೀಗರ ಎದುರುಗೊಳ್ಳುವ ಸಂಪ್ರದಾಯ ನಡೆಯಿತು. ಎರಡೂ ಗೊಂಬೆಗಳಿಗೆ ಅರಿಷಣ ಹಚ್ಚಿ ಸ್ನಾನ ಮಾಡಿಸಲಾಯಿತು. ನಂತರ ಮೊದಲೇ ಸಿದ್ಧಗೊಂಡಿದ್ದ ಮದುವೆ ಮಂಟಪದಲ್ಲಿ, ಎರಡೂ ಗೊಂಬೆಗಳನ್ನು ಕೂಡಿಸಿ ಶಾಸ್ತ್ರೋಕ್ತ ಮದುವೆ ಮಾಡಿಸಲಾಯಿತು. ನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ರೇಷ್ಮಾ ಬಾರಕೇರ, ಸೈದಮ್ಮ ಬೆಣ್ಣಿ, ಪ್ರೀತಿ ಹೊನಕೇರಿ, ಕಾವೇರಿ ಭಜಂತ್ರಿ, ಲಕ್ಷ್ಮೀ ರಾಠೋಡ, ಯಲ್ಲಪ್ಪ ಭಜಂತ್ರಿ, ರಾಮು ರಾಠೋಡ ಇನ್ನೀತರರಿದ್ದು, ವಿವಿಧ ಸಂಪ್ರದಾಯಗಳನ್ನು ಕೈಗೊಂಡರು. ಮಳೆಗಾಗಿ ಜನ ವಿವಿಧ ಸ್ತರದ ಪೂಜೆಗಳಿಗೆ ಮೊರೆ ಹೋಗುತ್ತಿರುವ ದೃಶ್ಯ ಭಾಗಶಃ ಎಲ್ಲೆಡೆಗೂ ಗೋಚರಿಸುತ್ತಿವೆ.
ಗುರ್ಜಿಪೂಜೆ:
ಗೊಂಬೆಗಳ ಮದುವೆಗೂ ಮೊದಲು ಗುರ್ಜಿ ಪೂಜೆಯೂ ಜರುಗಿತು. ಬಾಲಕನೊಬ್ಬ ಗುರ್ಜಿ ಹೊತ್ತುಕೊಂಡು ಮನೆ ಮನೆಗೆ ಮಹಿಳೆಯರೊಂದಿಗೆ ತೆರಳಿದ. ಮಹಿಳೆಯರೆಲ್ಲಾ ಗುರ್ಜಿಗೆ ನೀರು ಹಾಕಿ, ಗುರ್ಜಿ ಹಾಡು ಹಾಡಿ ಪೂಜೆ ಸಲ್ಲಿಸಿದರು.

ದನಕರಗಳಿಗೂ ಆತಂಕ : ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸಕಾಲಕ್ಕೆ ಬಾರದ ಪರಿಣಾಮ ಜನ,ಜಾನುವಾರುಗಳು ಪರದಾಡುವಂತಾಗಿದೆ.ತಿನ್ನಲು ಮೇವಿಲ್ಲ.ಕುಡಿಯಲು ನೀರಿಲ್ಲ. ಆತಂಕದ ಕಾಮೋ9ಡ ದಟ್ಟವಾಗುತ್ತಿದೆ. ಆಥಿ9ಕ ಸಂಕಷ್ಟಕ್ಕೆ ಮಳೆರಾಯ ದಾರಿ ಕಲ್ಪಿಸಿಕೊಡುತ್ತಿದ್ದಾನೆ.ಇವುಗಳ ಮುಕ್ತಿಗೆ ಮೇಘರಾಜ ಕೃಪೆ ನೀಡಲೇ ಬೇಕಾಗಿದೆ. ನೀರಿನ ದಾಹಕ್ಕಾಗಿ ಭೂವೋಡಲು ಕಾದಿದೆ. ಜಲ ಹನಿಗಳ ಲೀಲೆ ಇದೀಗ ಆರಂಭಗೊಳ್ಳಬೇಕಷ್ಟೇ !

ಮಳಿ ಬರ್ಲಿಲ್ಲ ಅಂದ್ರ ರೈತರ ಹಣಿಬರಾ ಛಂದ ಇಲ್ಲ ರೀ. ಪರಸ್ಥಿತಿ ಭಾಳ ಹದಗೆಟ್ತದ ರೀ. ರೈತರ ಗೋಳು ಹೇಳ್ಲಾರದಂಗ ಅಗತೈತ್ರರೀ. ನಮ್ಮ 6 ಎಕರೆ ಕಬ್ಬ ನೀರಿಲ್ದ ಒಣಗ್ಲಾಖತ್ತದರೀ. ಹೋಳ್ಯಾಗ ನೀರ ಕಮ್ಮಿ ಅಗೈತ್ರೀರಿ. ಕೃಷ್ಣಾ ನದಿಯಾಗಂತೂ ನೀರ ಬತ್ತೈತ್ತರೀ. ಬೋರವೆಲ್ ದೊಳಗೂ ನೀರ ಇಲ್ಲ ರೀ. ಮುಂಗಾರು ಮಳಿ ಬರಲಾರದ ಕಾರಣ ಎಲ್ಲಾರೂ ಫಜೀತಿ,ಹೈರಾಣ ಅಗ್ಯಾರ. ಮಳಿಗಾಗಿ ದಿನಾ ಕಾದ ಕಾದ ಜನಾ ಸುಸ್ತಾಗ್ಯಾರ್ ರೀ. ರೈತರಿಗ ಈಗ ದೇವರೇ ಕಾಪಾಡಬೇಕು. ಮಳಿ ಸಂಬಂಧ ಜನಾ ಜಪತಪ ಮಾಡಿದ್ರೂ ಮಳಿ ಬರವತ್ಲ್ತ್.ಮುಂದ ಏನ ಮಾಡಬೇಕ ಅಂತ ದಿಕ್ಕ ತೋಚವಲ್ತ ರೀ.
ಲಾಲಸಾಬ್.ಆರ್.ಸಿಂಧೆ
ಯುವ ರೈತ,ಶಿಕ್ಷಕ, ಅರಳದಿನ್ನಿ