ವರುಣನ ಆರ್ಭಟ : ಸೇತುವೆ ಮುಳುಗಡೆ, ಮನೆಗಳಿಗೆ ನುಗ್ಗಿದ ನೀರು, ಸಂಕಷ್ಟಕ್ಕೆ ಸಿಲುಕಿದ ನಾಗರೀಕರು


ಮಾರೆಪ್ಪ ನಾಯಕ
ಸಿರುಗುಪ್ಪ, ಸೆ.08: ತಾಲೂಕಿನಲ್ಲಿ ನಿರಂತರ ಮಳೆಯ ಆರ್ಭಟಕ್ಕೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಗರಿ, ನದಿ, ಹಳ್ಳಗಳು, ತುಂಗಭದ್ರ ನದಿಯು ತುಂಬಿ ಹರಿಯುತ್ತಿದ್ದ ಪರಿಣಾಮವಾಗಿ ರಸ್ತೆ ಸಂರ್ಪಕ ಕಡಿತವಾಗಿ ಸಾರ್ವಜನಿಕರ ಬದುಕು ಅಸ್ತವ್ಯಸ್ತವಾಗಿದೆ.
ಮನೆಗಳಿಗೆ ನುಗ್ಗಿದ ನೀರು : ವೇದವತಿ ಹಗರಿ ನದಿಯ ದಡದಲ್ಲಿರುವ ತಾಳೂರು, ಉಳ್ಳೂರು, ಉತ್ತನೂರು, ಮಾಟಸೂಗೂರು, ಮುದೇನೂರು ಗ್ರಾಮಗಳಲ್ಲಿ ಮನೆಗಳಿಗೆ ಹಿನ್ನಿರು ನುಗ್ಗಿ ನೆರೆಹಾವಳಿಯಂತೆಯಾಗಿದೆ.
ಬೆಳೆಗಳಿಗೆ ನುಗ್ಗಿದ ನೀರು : ತುಂಗಭದ್ರ ನದಿಯ ದಡದಲ್ಲಿರುವ ಗ್ರಾಮಗಳಿಗೆ ಭತ್ತದ ಗದ್ದೆಗಳಿಗೆ, ತೋಟಗಳಿಗೆ ಇತರೆ ಬೆಳೆಗಳ ಜಮೀನುಗಳಿಗೆ ಬಾರಿ ಪ್ರಮಾಣದ ನೀರು ನುಗ್ಗಿ ಬೆಳೆಯು ನಾಶವಾಗಿದೆ.
ಅಪಾಯದಲ್ಲಿ ಸಿಲುಕಿದ ಭಕ್ತರು : ತಾಲೂಕಿನ ಬಲಕುಂದಿ ಮತ್ತು ಮುದೆನೂರು ಗ್ರಾಮದ ಮಧ್ಯದಲ್ಲಿರುವ ಶ್ರೀಶನಿಮಹಾತ್ಮ ದೇವಸ್ಥಾನಕ್ಕೆ ನೀರು ನುಗ್ಗಿದೆ, ದೇವರ ದರ್ಶನಕ್ಕೆ ಹೋಗಿದ್ದ ಭಕ್ತರು ಸಿಲುಕಿಕೊಂಡಿದ್ದು, ನೆರವಿಗೆ ಹೋಗಿದ್ದ ಸ್ಟೀಮರ್ ಮತ್ತು ಚಾಲಕ ಕೊಚ್ಚಿಕೊಂಡು ಹೋಗಿದೆ.
ಸೇತುವೆ ಮುಳುಗಡೆ : ತಾಲೂಕಿನ ರಾರಾವಿ ಗ್ರಾಮದ ಹತ್ತಿರ ಹರಿಯುವ ವೇದವತಿ ಹಗರಿ ನೀರು ಹೆಚ್ಚಾಗಿ ಸಿರುಗುಪ್ಪ ಮತ್ತು ರಾರಾವಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಮುಳುಗಿದೆ. ಕುಡುದರಹಾಳ ಗ್ರಾಮ ಹತ್ತಿರ ಹರಿಯುವ ವೇದವತಿ ಹಗರಿ ನೀರು ಹೆಚ್ಚಾಗಿ ಸಿರುಗುಪ್ಪ ಮತ್ತು ಕುಡುದರಹಾಳ ಸಂಪರ್ಕ ಕಲ್ಪಿಸುವ ಸೇತುವೆಯು ಮುಳುಗಿದೆ. ಹೆಚ್.ಹೊಸಳ್ಳಿ ಗ್ರಾಮದ ಹತ್ತಿರ ಹರಿಯುವ ಹಿರೆಹಳ್ಳವು ತುಂಬಿ ಹರಿದ ಪರಿಣಾಮವಾಗಿ ಹೆಚ್.ಹೊಸಳ್ಳಿ ಮತ್ತು ತಾಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ, ಮುದೆನೂರು ಗ್ರಾಮದ ಹತ್ತಿರ ಹರಿಯುವ ವೇದವತಿ ಹಗರಿ ನದಿಯ ಮಧ್ಯದಲ್ಲಿರುವ ಶ್ರೀಶನಿಮಹಾತ್ಮ ದೇವಸ್ಥಾನಕ್ಕೆ ಖಾಸಗಿವಾಗಿ ನಿರ್ಮಿಸಿದ ಕಬ್ಬಿಣದ ಸೇತುವೆ ಮುಳುಗಿದ ಪರಿಣಾಮವಾಗಿ ಸಾರ್ವಜನಿಕರು ಮತ್ತು ಪ್ರಯಾಣಿಕರು ಓಡಾಡಲು ಸಾಧ್ಯವಾಗುತ್ತಿಲ್ಲ.
ಶಾಸಕ ಭೇಟಿ : ತಾಲೂಕಿನಲ್ಲಿ ಮಳೆ ಮತ್ತು ನದಿಯ ಪ್ರವಾಹವಾಹಕ್ಕೆ ಹಿಡಾಗಿರುವ ವಿವಿಧ ಗ್ರಾಮಗಳಿಗೆ ತಾಲೂಕಿನ ಅಧಿಕಾರಿಗಳೊಂದಿಗೆ ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸತತವಾಗಿ ಸುರಿಯುತಿರುವ ಮಳೆಯ ಪರಿಣಾಮದಿಂದಾಗಿ ಹಳ್ಳಕೊಳ್ಳಗಳು ಹೆಚ್ಚಾಗಿ ತುಂಬಿ ಹರಿಯುತ್ತಿದ್ದು, ಬೆಳೆಗಳ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾಳಾಗಿದ್ದು, ನದಿಯ ದಡದಲ್ಲಿರುವ ಮನೆಗಳಿಗೆ ನೀರು ನುಗ್ಗಿ ವಾಸ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ, ಎಲ್ಲಾವನ್ನು ಪರಿಶೀಲಿಸಲಾಗಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಎಂ.ಎಸ್.ಸೋಮಲಿಂಗಪ್ಪ, ಶಾಸಕ, ಸಿರುಗುಪ್ಪ ವಿಧಾನಸಭಾ ಕ್ಷೇತ್ರ.

Attachments area