ವರುಣನ ಆರ್ಭಟಕ್ಕೆ ಮನೆಗಳು ಬೆಳೆ ಹಾನಿ

ಹರಿಹರ.ಏ.23 ; ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಹಾಗೂ ಭತ್ತ ಬೆಳೆಗೆ ಹಾನಿಯಾಗಿರುವ ಘಟನೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದಿದೆ  ಹೊಸಹಳ್ಳಿ,ಜಿಗಳಿ, ಹಾಲಿವಾಣ,ಸಂಕ್ಲೀಪುರ ಗ್ರಾಮದಲ್ಲಿ ತಲಾ ಒಂದೊಂದು ಭಾಗಶಃ ಮನೆ ಹಾನಿಯಾಗಿದ್ದರೆ ಗುಳದಾಳಿ ವೃತ್ತದ ಸಂಕ್ಲೀಪುರ ಗ್ರಾಮದಲ್ಲಿ ಸುಮಾರು ಐವತ್ತು ಎಕರೆಯಷ್ಟು ಭತ್ತದ ಬೆಳೆ ಭಾರಿ ಮಳೆ ಗಾಳಿಗೆ ಹಾನಿಯಾಗಿದೆಯೆಂದು ಹೋಬಳಿ ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳಿಂದ ಹಾನಿಯಾಗಿರುವ ಘಟನಾ ಸ್ಥಳಕ್ಕೆ ತೆರಳಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಹೋಬಳಿ ಮಟ್ಟದ ರಾಜಸ್ವ ನಿರೀಕ್ಷಕ ಆನಂದ್ ಪತ್ರಿಕೆಗೆ ತಿಳಿಸಿದರು