ವರುಣನ ಆರ್ಭಟಕ್ಕೆ ಧರೆಗುರುಳಿದ ಮರಗಿಡಗಳು ಪಟ್ಟಣ ಜನ ಜೀವನ ಅಸ್ತವ್ಯಸ್ತ

ಕೆಂಭಾವಿ:ಮೇ.27: ಪಟ್ಟಣ ಸೇರಿದಂತೆ ಕೆಂಭಾವಿ ವಲಯದ ಹಲವು ಗ್ರಾಮಗಳಲ್ಲಿ ವರುಣನ ಆರ್ಭಟ ರವಿವಾರ ಬಲು ಜೋರಾಗಿತ್ತು ಭಾರಿ ಬಿರುಗಾಳಿ, ಆಲಿಕಲ್ಲು ಮಿಶ್ರಿತ ಸುರಿದ ಮಳೆ ಹಲವೆಡೆ ಅವಾಂತರ ಸೃಷ್ಠಿಸಿದೆ.

ಮಧ್ಯಾಹ್ನದಿಂದ ಆರಂಭವಾದ ಮಳೆಯ ಜೊತೆಗೆ ಬೀಸಿದ ಗಾಳಿಗೆ ನಗರದ ವಿವಿಧೆಡೆ ಗಿಡ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ , ರಸ್ತೆ ಮೇಲೆ ನೀರು ಹಾರಿದ ಪರಿಣಾಮ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಪಟ್ಟಣ ಎಸ್ ಬಿಎಸ್ ಕ್ಯಾಂಪ್, ಪೆÇೀಲಿಸ್ ಠಾಣೆ, ಸರ್ಕಾರಿ ಶಾಲೆ ಮತ್ತು ರಸ್ತೆಯ ಬದಿಗಳಲ್ಲಿ ನೆಡಲಾಗಿದ್ದ ಬಹು ವರ್ಷದಿಂದ ಇದ್ದ ಮರಗಳು ಧರೆಗುರುಳಿವೆ
ಟಿನ್ ಶೆಡ ಗಾಳಿಯ ವೇಗಕ್ಕೆ ಹಾರಿಹೋಗಿವೆ ಊಟಕ್ಕಾಗಿ ತಂದ ದವಸ ಧಾನ್ಯಗಳು ನೀರುಪಾಲಾಗಿದೆ.ಮಳೆ ಅವಘಡದಿಂದ ಪಟ್ಟಣದಾದ್ಯಂತ ಎರಡು ದಿನಗಳಕಾಲ ವಿದ್ಯುತ್ ಸರಬರಾಜಿನಲ್ಲಿ ವತ್ಯಯವಾಗಲಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.