ವರುಣನ ಆರ್ಭಟಕ್ಕೆ ತತ್ತರಿಸಿದ ಕೊಟ್ಟೂರಿನ ಜನತೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.06:  ಪಟ್ಟಣದಲ್ಲಿ ಸೋಮವಾರ ಸಂಜೆಯ ವೇಳೆಯಲ್ಲಿ ವರುಣನ ಅಬ್ಬರಕ್ಕೆ ಪ್ರತಿನಿತ್ಯ ಸಂತೆ ನಡೆಯುವ ಮಾರುಕಟ್ಟೆ ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಯಿತು.
ವರುಣನ ಅಬ್ಬರಕ್ಕೆ ತತ್ತರಿಸಿದ ಕೊಟ್ಟೂರಿನ ಜನತೆಯ ಜೀವನ ಅಸ್ತವ್ಯಸ್ಥಗೊಂಡು ಪ್ರಮುಖರಸ್ತೆಗಳಲ್ಲಿ ಹಳ್ಳದಂತೆ ಹರಿಯುತ್ತಿರುವ ನೀರಿನ ಒಡೆತದಿಂದ ಗೊಬ್ಬರದ ಅಂಗಡಿಯ ಒಳಗಡೆ ನೀರು ನುಗ್ಗಿ ಹಾಳಾಗಿದೆ.
ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ ಮಳೆ ನೀರಿನ ಒಡೆತದಿಂದ ಗಾಡಿಯ ಸೈಲೆನ್ಸರ್ ಒಳಗಡೆ ನೀರು ನುಗ್ಗಿ ಗಾಡಿ ಜಕಮ್ ಆಗಿ ಗಾಡಿಗಳು ನಿಂತಿವೆ.
ಮಳೆಯ ಅವತಾರಕ್ಕೆ ವಾರ್ಡ್ಗಳಾದ ಮುದುಕನ ಕಟ್ಟೆ, ಕೊರಚರ ಓಣಿ. ಅಂಬೇಡ್ಕರ್ ನಗರ. ತೇರು ಬಯಲು ಹಲವಾರು ವಾರ್ಡ್ಗಳು ನೀರು ತುಂಬಿ ತುಳುಕುತ್ತಿತ್ತು.
ಇಲ್ಲಿಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಮಳೆಯ ಬಂದ ಪರಿಣಾಮವಾಗಿ  ಕೊಳಚೆ ನೀರಲ್ಲ ಬಸ್ ನಿಲ್ದಾಣದಲ್ಲಿ ನಿಂತು ಮಳೆಯ ಅವತಾರಕ್ಕೆ ನಿಲ್ದಾಣ ಮಾಯವಾದಂತಾಯಿತು ಇದರಿಂದ ಕೆಲ ಕಾಲ ಸಂಚಾರಕ್ಕೆ ತೊಂದರೆಯಾಯಿತು .

Attachments area