ವರುಣನ ಆರ್ಭಟಕ್ಕೆ ಕುರಿಗಳ ಸಾವು

ಹರಿಹರ.ಜ.9; ತಾಲ್ಲೂಕಿನಲ್ಲಿ ನಿನ್ನ ಸುರಿದ ಮಳೆಯ ಆರ್ಭಟಕ್ಕೆ ತಾಲ್ಲೂಕಿನ  ಕೆಲವು ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದ್ದು ಮನೆ ಕುಸಿದು ಬಿದ್ದು ಕುರಿಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ ನಿನ್ನೆ ಸಂಜೆಯಿಂದ ಮಧ್ಯ ರಾತ್ರಿವರೆಗೂ ವರುಣನ ಅರ್ಭಟಕ್ಕೆ  ಗುತ್ತೂರು 1ಕೊಂಡಜ್ಜಿ 1ಮಿಟ್ಲಕಟ್ಟೆ ಗ್ರಾಮಗಳಲ್ಲಿ  1 ಕಚ್ಚಾ ಮತ್ತು ಪಕ್ಕಾ ಮನೆಗಳು ಭಾಗಶಃ ಕುಸಿದು ಬಿದ್ದಿದ್ದು ಹೊಸಹಳ್ಳಿ ಗ್ರಾಮದ 45  ಎಕರೆ  ಊಟದ ಜೋಳ, ಸಿರಿಗೇರಿ ಗ್ರಾಮದಲ್ಲಿ 7ಎಕರೆ ಕಡ್ಲೆ ಬೇಳೆ,  ರಾಮತೀರ್ಥ 20 ಎಕರೆ ಊಟದ ಜೋಳ  ಬೆಳೆ ಮಳೆಗೆ ಹಾನಿಯಾಗಿದ್ದರೆ ಬೆಳ್ಳೂಡಿ ಗ್ರಾಮದಲ್ಲಿ ಸಿಡಿಲು ಮಳೆಗೆ 10 ಕುರಿಗಳು ಮೃತಪಟ್ಟಿವೆ ಮಳೆ ವಿವರ  ಹರಿಹರ  93.8 ಮಲೆಬೆನ್ನೂರು  23.8  ಕೊಂಡಜ್ಜಿ 87.2 ಹೊಳೆಸಿರಿಗೇರಿ 31.4 ಒಟ್ಟು 236.2 ಸೆಂಟಿಮೀಟರ್ ತಾಲ್ಲೂಕಿನಲ್ಲಿ ಮಳೆಯಾಗಿದ್ದು ಹೋಬಳಿ ಮತ್ತು ಕಸಬಾ ಗ್ರಾಮದ ರಾಜಸ್ವ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಮಳೆಗೆ ಹಾನಿಯಾಗಿರುವ ವರದಿ ಯನ್ನೂ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುತ್ತದೆ ಎಂದು ರಾಜಸ್ವ ನಿರೀಕ್ಷಕ ಆನಂದ್ ತಿಳಿಸಿದರು.