ವರುಣನ ಅರ್ಭಟ ನೆಲಕ್ಕೂರಿಗಿದ ಭತ್ತ ರೈತರಿಗೆ ಸಂಕಷ್ಟ

ಮಸ್ಕಿ,ನ.೨೨- ತಾಲೂಕಿನ ನಾನಾ ಭಾಗಗಳಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಬಿಡುವು ಕೊಡದೆ ಮಳೆ ಸುರಿಯುತ್ತಿರುವ ಕಾರಣ ತುಂಗ ಭದ್ರ ಎಡ ದಂಡೆ ಕಾಲುವೆ ಅಚ್ಚು ಕಟ್ಟು ಪ್ರದೇಶದಲ್ಲಿ ಕಟಾವು ಹಂತಕ್ಕೆ ತಲುಪಿದ್ದ ಭತ್ತ, ಹತ್ತಿ, ಇನ್ನಿತರ ಬೆಳೆಗಳು ನೆಲಕ್ಕೂರಿಗಿರುವ ಕಾರಣ ಬೆಳೆಗಳು ಹಾಳಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭತ್ತ ಬೆಳೆದು ಕೊಯ್ಲು ಹಂತದ ವೇಳೆ ಕಾರ್ಮೋಡ ಕವಿದಿದೆ ಮಳೆ ಅರ್ಭಟ ಜತೆ ಗಾಳಿ ಬೀಸುತ್ತಿರುವ ಕಾರಣ ಗದ್ದೆಗಳಲ್ಲಿ ಭತ್ತ ನೆಲಕ್ಕೆ ಒರಗಿದೆ ಗದ್ದೆಗಳಲ್ಲಿ ಮಳೆ ನೀರು ಸಂಗ್ರಹ ಗೊಂಡಿರುವ ವೇಳೆ ಭತ್ತ ನೆಲಕ್ಕ ಒರಗಿದ ಕಾರಣ ಭತ್ತದ ಕಾಳು ನೀರು ಪಾಲಾಗುವ ಆತಂಕ ರೈತರಿಗೆ ಎದುರಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಗೋಳಾಡುತ್ತಿದ್ದಾರೆ. ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಸರ್ವೆ ಕಾರ್ಯ ನಡೆ ಸ ಬೇಕು ಸಕಾಲದಲ್ಲಿ ಸರಕಾರಕ್ಕೆ ಬೆಳೆ ನಷ್ಟ ವರದಿ ನೀಡಬೇಕಾಗಿದೆ ಉತ್ತಮ ಬೆಳೆ ನಿರೀಕ್ಷೆ ಯಲ್ಲಿದ್ದ ಅನ್ನದಾತರಿಗೆ ಅಕಾಲಿಕ ಮಳೆ ಶಾಪ ವಾಗಿ ಪರಿಣಮಿಸಿದೆ.
ಭತ್ತ ಕೊಯ್ಲು ಮಾಡುವ ವೇಳೆ ಮಳೆ ಬರುತ್ತಿರುವುದು ನೋಡಿದರೆ ಕಣ್ಣೀರು ಬರುತ್ತಿದೆ ಮಾರು ಕಟ್ಟೆ ಯಲ್ಲಿ ಭತ್ತಕ್ಕೆ ಉತ್ತಮ ಬೆಲೆಯೂ ಇಲ್ಲದೆ ಕಂಗಾಲಾಗಿರುವ ರೈತರಿಗೆ ಮಳೆ ಆಘಾತ ನೀಡಿದೆ ಕೃಷಿ ಅವಲಂಭಿತ ಕುಟುಂಬಗಳ ಸ್ಥಿತಿ ಅಯೋಮಯ ವಾಗಿದೆ. ಮಳೆ ಯಿಂದ ಹಾಳಾದ ಪ್ರದೇಶ ಗಳಿಗೆ ಶಾಸಕ ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಇಬ್ಬರು ಭೇಟಿ ನೀಡಿ ಸರಕಾರ ದಿಂದ ಪರಿಹಾರ ಕೊಡಿಸುವ ಭರವಸೆ ನೀಡುತ್ತಿದ್ದಾರೆ ಬೆಳೆ ನಷ್ಟ ಗೊಂಡ ರೈತರಿಗೆ ಪರಿಹಾರ ಯಾವಾಗ ಕೈ ಸೇರಲಿದೆ ಎಂಬುದು ಯಕ್ಷ ಪ್ರಶ್ನೆ ಯಾಗಿದೆ ಹಾಲಿ, ಮಾಜಿ ಶಾಸಕರು ಸೇರಿ ಬೆಳೆ ನಷ್ಟ ಗೊಂಡ ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.