
ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರ ” ವರಹಾಚಕ್ರಂ”. ಶೀರ್ಷಿಕೆ ಬಿಡುಗಡೆಯಾಗಿದೆ.
ಶೀರ್ಷಿಕೆ ಕೆಳಗೆ ಬದುಕಿ, ಬದುಕಲು ಬಿಡಿ ಎನ್ನುವ ಅಡಿ ಬರಹವಿದೆ. ನಟಿ ಪ್ರೇಮಾ ,ಡಾ. ವಿ.ನಾಗೇಂದ್ರ ಪ್ರಸಾದ್ ಮತ್ತಿತರು ಶೀರ್ಷಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಮಂಜುನಾಥ್ ಮಸ್ಕಲ್ ಮಟ್ಟಿ, ,ಯುಗ ಪುರುಷ ಚಿತ್ರ ತೆರೆಗೆ ಬಂದು 9 ವರ್ಷದ ನಂತರ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ.
ಈ ವೇಳೆ ಮಾತಿಗಿಳಿದ ಅವರು ,ಮೊದಲ ಬಾರಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನಿರ್ಮಾಣದಲ್ಲಿ ಕಳೆದುಕೊಂಡು ಕಲಿತುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಹೊಸ ನಾಯಕರು ಚಿತ್ರದಲ್ಲಿದ್ದಾರೆ. ಪೇಮೆಂಟ್ ಕೇಳಲ್ಲ ಎನ್ನುವುದು ಒಂದಡೆಯಾದರೆ ನಿರ್ದೇಶಕ ಕಲ್ಪನೆಗೆ ತಕ್ಕಂತೆ ಕಲಾವಿದನ್ನು ಪಾತ್ರಕ್ಕೆ ಬಳಸಿಕೊಳ್ಳಬಹುದು ಎಂದರು
ಪ್ರೇಮ ಅವರು ನನ್ನ ಮೊದಲ ಕ್ರಶ್, ಹೆಂಡ್ತಿ ಮುಂದೆ ಅವರನ್ನು ಹೊಗಳುತ್ತಿದ್ದೆ. ನಾಯಕರಾಗಿ ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಸೇರಿದಂತೆ ಚಿತ್ರದಲ್ಲಿದ್ದಾರೆ. ಜೊತೆಗೆ ಪ್ರೇಮ, ಸಾಯಿ ಕುಮಾರ್ ಮತ್ತಿತತರು ಇದ್ದಾರೆ ಎಂದರು.
ಹಿರಿಯ ನಟಿ ಪ್ರೇಮ ಮಾತನಾಡಿ ಚಿತ್ರ ಮಾಡಬಾರದು ಎಂದು ಸುಮ್ಮನಿದ್ದೆ. ಮಂಜುನಾಥ್ ಮಸ್ಕಲ್ ಮಟ್ಟಿ ಹೇಳಿದ ಕಥೆ ಕೇಳಿ ಇಷ್ಟವಾಯಿತು. ಹೀಗಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರು.
ಸಾಹಿತ್ಯ, ಸಂಗೀತ, ಸಂಭಾಷಣೆ , ಡಾ. ವಿ.ನಾಗೇಂದ್ರ ಪ್ರಸಾದ್, ಇವತ್ತಿನ ಸಮಾಜದ ಓರೆ ಕೋರೆಗಳನ್ನು ಮುಂದಿಟ್ಟುಕೊಂಡು ಕಥೆ ಸಿದ್ದ ಪಡಿಸಲಾಗಿದೆ. ಕಮರ್ಷಿಲ್, ಆಕ್ಷನ್ ,ಎಮೋಷನ್ ಜೊತೆಗೆ ಸಮಾಜಕ್ಕೆ ಸಂದೇಶ ಕೊಡುವ ಚಿತ್ರ. ಸಂಭಾಷಣೆ ಅಪರೂಪಕ್ಕೆ ಬರೆಯುತ್ತಿದ್ದೇನೆ ಎಂದರು