ವರಸಿದ್ದಿ ಹೋಳಿ ಕಾಮಣ್ಣನಜಾತ್ರೆ

ಚನ್ನಮ್ಮಕಿತ್ತೂರ- 28 ಹೋಳಿ ಹಬ್ಬವೆಂದರೆಎಲ್ಲರಕಣ್ಣಮುಂದೆ ಬರುವುದು ಬಣ್ಣದ ಆಟ ಕಿತ್ತೂರತಾಲೂಕಿನದೇವಗಾಂವಗ್ರಾಮದಓಣಿಗಳಾದ ಶಿರಗಾಪೂರ ಹೊಸೂರ, ಲಿಂಗದಳ್ಳಿ ಬಣ್ಣವಿಲ್ಲದೇ ಹೋಳಿ ಹಬ್ಬಜಾತ್ರೆ ಮಾಡುವುದು ಸಾವಿರಾರು ವರ್ಷಗಳಿಂದ ಸಡಗರ ಸಂಭ್ರಮಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಉತ್ತರಕರ್ನಾಟಕದಲ್ಲಿ ಇತಂಹ ಹೋಳಿ ಹಬ್ಬವನ್ನುದೇವಗಾಂವ ಶಿರಗಾಪೂರ ಕಾಮಣ್ಣನಜಾತ್ರೆಯಾಗಿಆಚರಿಸುತ್ತಾರೆ.ಜಾತ್ರೆ ಬಂತ್ತೆಂದರೆಊರಿನಜನರು ಮನೆ ಧೂಳು ಜಾಡಿಸಿ ಬಣ್ಣ ಸುಣ್ಣಗಳಿಂದ ಮನೆ ಸಿಂಗರಿಸುತ್ತಾರೆ. ಮನೆಗೆ ಬಿಗರು ಬರುತ್ತಾರೆಂದುತರಹತರದಅಡಿಗೆ ಮಾಡಿಅಂದರೆ ಹೋಳಿಗೆ, ಕರಚಿಕಾಯಿ, ವಡೆ, ಶಾವಿಗೆ, ಇನ್ನೂ ಹಲವಾರು ಹರಿದಿನಸ ಮಾಡಿಊಣ ಬಡಿಸುತ್ತಾರೆ.
ಕಾಮಣ್ಣನನ್ನು ಭಾರೀಗಾತ್ರದ ಪ್ರತಿಕೃತಿ ಮಾಡಿ ಮೂರು ದಿನ ಜಾತ್ರೆಯನ್ನು ಹಮ್ಮಿಕೊಂಡಿರುತ್ತಾರೆ.ಈ ಹಬ್ಬದಲ್ಲಿಒಬ್ಬರಿಗೊಬ್ಬರು ಬಣ್ಣಎರಚುವುದುಕಾಣುವುದಿಲ್ಲ. ಅದರ ಬದಲಿಗೆ ಹೊಸ ಬಟ್ಟೆ ಧರಿಸಿ ಮೂರು ದಿನಗಳ ವರೆಗೆಗ್ರಾಮದವರು ಹಾಗೂ ಸುತ್ತಮುತ್ತಲಿನ ಜನರು ಸೇರಿಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿ ಜಾತ್ರೆ ಮಾಡುತ್ತಾರೆ.
ಪುರಾತನ ಕಾಲದಿಂದಲೂ ನಡೆದುಕೊಂಡ ಬಂದಂತಹ ವಾಡಿಕೆಯಿದೆ. ನೂತನವಾಗಿ ಮದುವೆಯಾದ ನವ ದಂಪತಿಗಳಿಗೆ ಮಕ್ಕಳ ಫಲ ಲಭಿಸದಿದ್ದರೆಅಂತಹ ಸತಿ-ಪತಿಜೋಡಿಗೆಕಾಮಣ್ಣನ ಪೂಜೆ ಮಾಡುವ ಪೂಜಾರಿಗಳಿಂದ ಕಾಮಣ್ಣನ ಹೆಸರಿನ ಮೇಲೆ ಉಡಿ ತುಂಬಿಸಿದ್ದೆಯಾದರೆ ಅಂತಹ ದಂಪತಿಗಳಿಗೆ ಮಾರನೆಯ ವರ್ಷದೊಳಗೆ ಮಗುವನ್ನುಎತ್ತಿಕೊಂಡುಜಾತ್ರೆಗೆ ಬರುವ ಹಾಗೆ ಆರ್ಶೀವಾದವಾಗುತ್ತದೆ. ನಂತರ ಆ ಮಗುವಿಗೆ ಕಾಮಣ್ಣನ ಹರಿಕೆರೂಪದಲ್ಲಿ”ತೂಕಾನು-ತೂಕತೆಂಗಿನಕಾಯಿಸಕ್ಕರೆಉತ್ತತ್ತಿ ಎಲೆಅಡಿಕೆಬಾಳೆಹಣ್ಣು”ಇಟ್ಟು ಆ ಮಗುವಿನ ಎಷ್ಟುತೂಕವಿದೆಯೋ ಅಷ್ಟುತೂಕ ತೆಂಗಿನಕಾಯಿಗಳನ್ನುಕೊಡುತ್ತಾರೆ.
ಹುಬ್ಬಿ ನಕ್ಷತ್ರ ದಿನದಂದು ಸಂಪ್ರದಾಯದಂತೆ ಪೂಜಿಸಿ ಕಾಮಣ್ಣನ ಹಕ್ಕಲಕ್ಕೆ ನೂರಾರುಜನಎತ್ತಿಕೊಂಡು ಹೋಗಿ ನಿಲ್ಲಿಸುತ್ತಾರೆ. ಕಾಮಣ್ಣನದಹನ ಸರಿಯಾಗಿ ಮಧ್ಯಹ್ನ 12 ಘಂಟೆಗೆ ಸುಮಾರು 15 ಸಾವಿರಜನರ ಮಧ್ಯ ನಡೆಯುತ್ತದೆ.ಕಾಮಣ್ಣನಿಗೆತೆಂಗಿನಕಾಯಿ, ಉತ್ತತ್ತಿ, ಬಾಳೆಹಣ್ಣು ಹಾರಿಸುತ್ತಾರೆ.ಇದು ಪುರಾತನದ ಸಂಪ್ರದಾಯವಾಗಿದೆ.
ಹೋಳಿ ಹುಣ್ಣಿಮೆಯ ದಿನದ ಪೂರ್ವದಲ್ಲಿಯೇಗ್ರಾಮದ ಪ್ರತಿಯೊಂದು ಮನೆಗಳಿಂದ ಹಳೆಯ ಬಟ್ಟೆ ಭತ್ತದ ಹುಲ್ಲು ಸಂಗ್ರಹಿಸಿ 40 ಅಡಿ ಎತ್ತರದ 20 ಅಡಿ ಅಗಲದಕಾಮಣ್ಣನನ್ನು ಸೃಷ್ಟಿ ಮಾಡಿ ಈ ಕಾಮಣ್ಣನಿಗೆ ಸುಮಾರು 35 ಮೀಟರ ಬಿಳಿ ಬಟ್ಟೆಯಿಂದ ತಯಾರಿಸಿದ ಅಂಗಿಯನ್ನುಕಾಮಣ್ಣನಿಗೆತೊಡಿಸುತ್ತಾರೆ.ಕಾಮಣ್ಣನನ್ನು ಬೆಳಿಗ್ಗೆ 7 ಘಂಟೆಗೆ ನೂರಾರುಜನ ಹೊತ್ತುಕೊಂಡು ಪ್ರಮುಖ ಓಣಿಗಳ ಮೂಲಕ ಮೆರವಣಿಗೆ ಮಾಡಿ ಭಕ್ತರೆಲ್ಲರುತಮ್ಮ ಹರಿಕೆಅರ್ಪಿಸುತ್ತಾರೆ.ನಂತರ ಶಿವಾನಂದ ಮಠಚೌವಟೆಪ್ಪನ ಹತ್ತಿರಇರುವಜಾಗೆಯಲ್ಲಿಕಾಮಣ್ಣನನ್ನುಕೂಡ್ರಿಸುತ್ತಾರೆ. ಹರಿಕೆ ಪೂಜೆ ಮುಗಿದ ನಂತರಕಾಮಣ್ಣನಿಗೆರತಿಯ ಭಾವಚಿತ್ರದೊಂದಿಗೆ ಸಂಪ್ರದಾಯಿಕವಾಗಿ ಬಾಸಿಂಗ ಕಟ್ಟಿ ಶಲ್ಯೆ ಹೊದಿಸಿ ಮಂತ್ರ ಹೇಳಿ ಅಕ್ಷತೆ ಹಾಕಿ ಮದುವೆ ಮಾಡುತ್ತಾರೆ.
ಹುಣ್ಣಿಮೆಯ ಮೊದಲೆ ದಿನದಂದುಕಾಮಣ್ಣನಗಣಿತರಲು ಪ್ರತಿಯೊಂದುಓಣಿಗೆ ಪಾಳೆ ಹಾಕಿರುತ್ತಾರೆ. ಖಾನಾಪೂರತಾಲೂಕಿನ ಭೂರಣಕಿಗುಡ್ಡದಿಂದ ಸುಮಾರು 100 ಅಡಿ ಎತ್ತರದಗಣಿ(ಮರ) ಕಡಿದು ಹಳಬಂಡಿಯಲ್ಲಿ ಮೆರವಣಿಗೆಯ ಮೂಲಕ ಜನತರುತ್ತಾರೆ. ಈ ಗಣಿ ಬರುವರೆಗೂ ಸಂಪ್ರದಾಯದಂತೆ ನೂರಾರುಜನ ಉಪವಾಸ ಮಾಡುತ್ತಾರೆ.ಗಣಿ ಬಂದ ಮೇಲೆ ಗಣಿ ಪೂಜಿಸಿ ಉಪವಾಸ ಬಿಡುತ್ತಾರೆ. ಹುಣ್ಣಿಮೆಯ ಮೂರನೆ ದಿನದಂದುಕಾಮಣ್ಣನ್ನು ಸ್ಮಶಾನಕ್ಕೆಕೊಂಡೊಯ್ದುಕಾಮಣ್ಣನನ್ನು ಕೂಡ್ರಿಸಿದ ಸ್ಥಳದಲ್ಲಿ ಗಣಿಯನ್ನು ಲಾವಣಿ ಪದ ಹಾಡುತ್ತಾ ಹರಿಜನರು ಹಲಗೆಯನ್ನು ಬಾರಿಸುತ್ತಾ ಸಾವಿರಾರುಜನ ಬಾಯಿ ಬಡಿಕೊಳ್ಳುತ್ತಾ ಹೋಳಿ ಕಾಮಣ್ಣನನ್ನು ನೆನೆಯುತ್ತಾಗಣಿ ನಿಲ್ಲಿಸುತ್ತಾರೆ. ನಂತರ ಹರಿಜನರು ಹೊತ್ತಿಸಿದ ಬೆಂಕಿಯಿಂದಕಾಮಣ್ಣನನ್ನುದಹನ ಮಾಡುತ್ತಾರೆ.ಜಾತ್ರೆಯ ಮೂರು ದಿನಗಳ ವರೆಗೆಧಾರ್ಮಿಕ, ನಾಟಕ, ಮನರಂಜನೆಗಳಂತಹ ಬಯಲು ಕುಸ್ತಿಗಳು ನಡೆಯುತ್ತವೆ.