ವರವಿನ ಮಲ್ಲೇಶ್ವರ ಜಾತ್ರೆ ಪ್ರಯುಕ್ತ ಶಾಂತಿ ಸಭೆ.

ಸಿರುಗುಪ್ಪ ಮೇ 21 : ಮೇ.26ರಂದು ಆಗಿಹುಣ್ಣಿಮೆಯಂದು ಜರುಗವ ಜಾತ್ರೆಯು ಕೋವಿಡ್-19 ಎರಡನೇ ಅಲೆಯು ಇರುವುದರಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶ್ರೀ ವರವಿನ ಮಲ್ಲೇಶ್ವರ ದೇವರ ಜಾತ್ರೆ ನಡೆಯದಂತೆ 144ಸೆಕ್ಸನ್ ಜಾರಿಗೆ ತಂದು ಜಾತ್ರೆಯನ್ನು ನಿಷೇಧಿಸಲಾಗಿದೆ, ಮನೆಯಲ್ಲಿ ಸರಳವಾಗಿ ಆಚರಿಸಿಕೊಳ್ಳುವಂತೆ ತಹಶೀಲ್ದಾರ ಎಸ್.ಬಿ.ಕೂಡಲಗಿ ಹೇಳಿದರು.
ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಶ್ರೀ ವರವಿನ ಮಲ್ಲೇಶ್ವರ ದೇವರ ಜಾತ್ರೆಯ ಅಂಗವಾಗಿ ಶುಕ್ರವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ತೆಕ್ಕಲಕೋಟೆ ಪ.ಪಂ.ಮುಖ್ಯಾಧಿಕಾರಿ ಈರಣ್ಣ, ಪಿ.ಎಸ್.ಐ.ಶಿವಕುಮಾರ್ ನಾಯ್ಕ, ಆರ್.ಐ.ಅನಂತಕುಮಾರ ಶೆಟ್ಟಿ, ವಿ.ಎ.ರಾಜೇಂದ್ರ ದೊರೆ, ಪ.ಪಂ.ಕಂದಾಯ ಅಧಿಕಾರಿ ಸುಬ್ರಮಣ್ಯ, ಕಿರಿಯ ಆರೋಗ್ಯ ಅಧಿಕಾರಿ ಶೋಭ ಮುಖಂಡರಾದ ತಿಪ್ಪಯ್ಯ, ಮಂಜು, ನಾಗರಾಜ, ಮಲ್ಲಿಕಾರ್ಜುನ, ಮಲ್ಲಿ, ಗುಂಡಣ್ಣ, ಮಹೇಶ, ರುದ್ರಮುನಿ, ವೀರೇಶ ಇದ್ದರು.