ವರಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ರೈತ ಸಾವು

Oplus_131072


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.11 ತಾಲೂಕಿನ ವರಲಹಳ್ಳಿ ಗ್ರಾಮದ ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ರೈತ ಮೃತಪಟ್ಟಿದ್ದಾನೆ.
 ಮೃತ ವ್ಯಕ್ತಿ ಮೂರಿಗೇರಿ ಪತ್ರೆಪ್ಪ (52) ತಮ್ಮ ಹೊಲದಲ್ಲಿರುವ ಬೋರವೆಲ್ ಗೆ  ಸಂಪರ್ಕಿಸಿದ್ದ  ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿ ಅಸುನಿಗಿದ್ದಾನೆ . ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು. ಸ್ಥಳದಲ್ಲಿ ವಿದ್ಯುತ್ ಸಂಪರ್ಕ ನೀಡಲು ಮುಂದಾದಾಗ ಕೈಗೆ ವಿದ್ಯುತ್ ತಗಲಿ ಸ್ಥಳದಲ್ಲಿ ಕುಸಿದಿದ್ದಾನೆ.
 ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಜೆಸ್ಕಾಂ ಇಲಾಖೆಯ ತೇಜ್ಯಾ  ನಾಯ್ಕ್,, ಕಂದಾಯ ನಿರೀಕ್ಷಕ ರಾಜು ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One attachment • Scanned by Gmail