ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

ಭಾರಿ ಜನಜಂಗುಳಿ

ಬೆಂಗಳೂರು, ಆ. ೪- ನಾಳೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಮನೆಗಳಲ್ಲಿ ವರಮಹಾಲಕ್ಷಿ ಪ್ರತಿಷ್ಠಾಪಿಸಿ ಅದ್ಧೂರಿ ಆಚರಣೆಗೆ ರಾಜ್ಯದ ಜನತೆಗೆ ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿದ್ದು, ಮಳೆಗೆ ಅಡ್ಡಗಾಲು ಹಾಕಿದ್ದಾನೆ. ಆದರೂ ನಗರದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಬೆಲೆ ಏರಿಕೆಯ ನಡುವೆಯೂ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಇಂದು ಬೆಳಿಗ್ಗೆಯಿಂದಲೇ ಜನರು ಸಿಟಿ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಭಾರಿ ಜನಸಂದಣಿ ಕಂಡು ಬಂದಿದೆ.
ಕೆಆರ್ ಮಾರುಕಟ್ಟೆಯಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿ ಜನರು ಜನರು ಜಮಾಯಿಸಿದ್ದರಿಂದ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಕಂಡು ವಾಹನ ಸವಾರರು ಪರದಾಡುವಂತಾಗಿದೆ.

ಜನವೋ ಜನ……
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅಗತ್ಯ ವಸ್ತು ಖರೀದಿಗೆ ಸಿಟಿ ಮಾರುಕಟ್ಟೆಯಲ್ಲಿ ಕಂಡು ಬಂದ ದೃಶ್ಯ…

ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣು ಮತ್ತು ಪೂಜಾ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ. ಆದರೂ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಬಾರಿಯೂ ಹೂ, ಹಣ್ಣುಗಳ ಬೆಲೆ ಶೇ. ೩೦ ರಿಂದಿ ೪೦ ರಷ್ಟು ಹೆಚ್ಚಳವಾಗಿದೆ. ಸೇವಂತಿಗೆ ಪ್ರತಿ ಕೆಜಿಗೆ ೩೨೦ ರೂ., ಮಲ್ಲಿಗೆ ಹಾರ ಸಾವಿರ ರೂ. ಗುಲಾಬಿ ಹೂ ಕೆಜೆ ೩೫೦ ರೂ. ಹೆಚ್ಚಳವಾಗಿವೆ.
ಹಣ್ಣುಗಳ ದರವು ಗಗನಕ್ಕೇರಿದ್ದು ಪ್ರತಿ ಕೆಜಿ ಬಾಳೆಹಣ್ಣು ೧೨೦-೧೫೦ ರೂ., ಸೀತಾಫಲ ಕೆಜಿ ೨೦೦ ರೂ. ಸೇಬು ಕೆಜಿ ೩೨೦-೪೬೦ ರೂ.ಗೆ ಏರಿಕೆಯಾಗಿದೆ. ಆದರೂ ಹಬ್ಬವನ್ನು ಆಚರಿಸಲೇಬೇಕಾದ ಅನಿವಾರ್ಯತೆಯಿಂದ ಬೆಲೆ ಏರಿಕೆಯ ನಡುವೆ ಭರಾಟೆ ಖರೀದಿ ನಡೆದಿದೆ