ವರಮಹಾಲಕ್ಷ್ಮಿ ಪೂಜೆಯಿಂದ ಭಾವೈಕ್ಯತೆ ಮೆರೆದ
ಅಳವಂಡಿಯ ಮುಸ್ಲೀಂ ಕುಟುಂಬ


(ಸಂಜೆವಾಣಿ ವಾರ್ತೆ)
ಕೊಪ್ಪಳ :ಅ.6- ರಾಜ್ಯಾದ್ಯಂತ ನಿನ್ನೆ ವರಮಹಾಲಕ್ಷ್ಮೀ ಹಬ್ಬವನ್ನು ಹಿಂದೂ ಧರ್ಮದ ಮಹಿಳೆಯರು ಶ್ರದ್ದಾ ಭಕ್ತಿಯಿಂದ ಆಚರಿಸಲಾಗಿದೆ. ಆದರೆ ಹಬ್ಬದ ನಿಮಿತ್ತ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ನಜೀರುದ್ದೀನ್ ಬಿಸರಳ್ಳಿ ಕುಟುಂಬ ತಮ್ಮ ನಿವಾಸದಲ್ಲಿ  ವರಮಹಾಲಕ್ಷ್ಮಿ ಪೂಜೆ ಮಾಡಿದೆ. ಮನೆಗೆ ತಳಿರು ತೋರಣ ಕಟ್ಟಿ, ದೇವರ ಪ್ರತಿಷ್ಠಾಪನೆ ಮಾಡುವ ಸ್ಥಳಕ್ಕೆ ದೀಪಾಲಂಕಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ಹೋಳಿಗೆ ನೈವೇದ್ಯ ಮಾಡಿ ಭಕ್ತಿಯಿಂದ ವರಮಹಾಲಕ್ಷ್ಮಿ ಪೂಜೆ ಸಲ್ಲಿಸಿದ್ದಾರೆ. ಹಾಗೂ ಆಪ್ತರನ್ನು ಕರೆದು ಊಟ ಬಡಿಸಿದ್ದೆದಾರೆ . ರಾಜ್ಯದಲ್ಲಿ ಇಂದು ಹಲವು ರೀತಿ ಧರ್ಮ ಗೊಂದಲದ ಪ್ರಕರಣಗಳ ಮಧ್ಯೆ ಇವರ ಈ ಆಚರಣೆ ಮಹತ್ವದ್ದು.

Attachments area