ವರನಟ ಡಾ.ರಾಜ್ 17ನೇ ಪುಣ್ಯತಿಥಿ

ಬೆಂಗಳೂರು,ಏ.೧೨- ಕನ್ನಡದ ಕಂಠೀರವ, ನಟ ಸಾರ್ವಬೌಮ ಡಾ.ರಾಜ್‌ಕುಮಾರ್ ಅಗಲಿ ಇಂದಿಗೆ ೧೭ ವರ್ಷ. ಅಣ್ರಾವ್ರು ಭೌತಿಕವಾಗಿ ಅಗಲಿದ್ದರೂ ಮಾನಸಿಕವಾಗಿ ಅಭಿಮಾನಿಗಳ ಹೃದಯಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
೧೭ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಆವರಣವನ್ನು ಸಿಂಗಾರ ಮಾಡಲಾಗಿದ್ದು ಕುಟುಂದಬ ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಿ ನಮಿಸಿದರು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಅಭಿಮಾನಿಗಳು ಡಾ. ರಾಜ್ ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿ ಅಣ್ರಾವ್ರ ಗುಣಗಾನ ಮಾಡಿದರು.
ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿ, ಅಣ್ಣಾವ್ರಿಗೆ ಭಕ್ತಿ ಪೂರ್ವಕವಾಗಿ ನಮನ ಸಲ್ಲಿಸಿದರು. ೧೭ ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅನ್ನದಾನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು..
ರಾಜ್ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಪಾರ್ವತಮ್ಮ ಮತ್ತು ಪುನೀತ್ ರಾಜ್ ಕುಮಾರ್ ಸಮಾಧಿಗೂ ಪೂಜೆ ಸಲ್ಲಿಸಲಾಯಿತು.