ವರನಟ ಡಾ.ರಾಜಕುಮಾರ ಜಯಂತಿ ಸರಳ ಆಚರಣೆ

????????????????????????????????????

ಬಳ್ಳಾರಿ, ಏ.24 : ಕನ್ನಡದ ಖ್ಯಾತ ವರನಟ ಡಾ.ರಾಜಕುಮಾರ ಅವರ ಜಯಂತಿಯನ್ನು ಸರಳವಾಗಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಆಚರಿಸಲಾಯಿತು.
ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ನಟ ಡಾ.ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವಿ.ಸಿ.ಗುರುರಾಜ್, ಸಿಬ್ಬಂದಿಗಳಾದ ವಿಜಯಕುಮಾರ್, ರೋಜಮ್ಮ, ವಿ.ಹನುಮಂತ, ವೈ.ಮಲ್ಲೇಶಪ್ಪ, ಮೈಲಾರಿಲಿಂಗಪ್ಪ, ನವೀನಕುಮಾರ್, ಉಮ್ಮೆ ಅಸ್ಮ ಕೆ.ಎಸ್, ಸುಷ್ಮಾ ಕೆ. ಸೇರಿದಂತೆ ಇತರರು ಇದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಗಿದೆ.