ಬೆಂಗಳೂರು,ಏ.೨೪- ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ, ನಟ ಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ಅವರ ೯೪ನೇ ಜನ್ಮದಿನ ಇಂದು. ಹೀಗಾಗಿ ನಾಡಿನಾದ್ಯಂತ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಅಣ್ಣಾವ್ರ ಹೆಸರಲ್ಲಿ ರಾಜ್ಯಾದ್ಯಂತ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ನಿನ್ನೆಯಷ್ಟೇ ಅಣ್ಣಾವ್ರ ಮೊಮ್ಮಗನ ಹುಟ್ಟುಹಬ್ಬ ಆಚರಿಸಿದ್ದ ಅಭಿಮಾನಿಗಳು ಇಂದು ಮೇರುನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

ವರನಟ, ಪದ್ಮಭೂಷಣ ಡಾ. ರಾಜ್‌ಕುಮಾರ್‌ರವರ ಜನ್ಮದಿನವಾದ ಇಂದು ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಸಮಾಧಿಗೆ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಮತ್ತು ಕುಟುಂಬ ವರ್ಗದವರು ಪೂಜೆ ಸಲ್ಲಿಸಿದರು.
ಕೆಲ ಅಭಿಮಾನಿಗಳು ತಾವಿರುವ ಕಡೆಯೇ ಹುಟ್ಟು ಹಬ್ಬ ಆಚರಿಸುತ್ತಿದ್ದರೆ, ಇನ್ನೂ ಹಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳು ದಂಡು ಹರಿದು ಬಂದಿದೆ. ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸುವುದು ಹಾಗೂ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.ಡಾ.ರಾಜ್ ಕುಟುಂಬದ ಸದಸ್ಯರು ಕೂಡ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಪಕ್ಕದಲ್ಲೇ ಇರುವ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಲಿದ್ದಾರೆ. ಅಣ್ಣಾವ್ರ ಅಭಿಮಾನಿಗಳ

ಕರ್ನಾಟಕ ರತ್ನ, ವರನಟ ಡಾ|| ರಾಜ್‌ಕುಮಾರ್‌ರವರ ಜನ್ಮದಿನಾಚರಣೆ ಪ್ರಯುಕ್ತ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಡಾ|| ರಾಜ್ ಸಮಾಧಿಗೆ ಸಚಿವ ಕೆ.ಗೋಪಾಲಯ್ಯ ತೆರಳಿ ಪುಷ್ಪಗುಚ್ಚವಿರಿಸಿ ನಮನ ಸಲ್ಲಿಸಿದರು. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಇದ್ದಾರೆ.
ಜೊತೆ ಕುಟುಂಬದ ಸದಸ್ಯರು ಅಭಿಮಾನಿಗಳ ಜೊತೆ ಸಮಯ ಕಳೆದಿದ್ದಾರೆ.ಅಣ್ಣಾವ್ರು ಅಗಲಿ ಹಲವು ವರ್ಷ ಕಳೆದಿದ್ದರೂ ಅವರ ಮೇಲಿನ ಕಿಂಚಿತ್ತೂ ಅಭಿಮಾನ ಕಡಿಮೆಯಾಗಿಲ್ಲ.