ವರದಿಗಾರ್ತಿ ಮೇಲೆ ಪೆÇಲೀಸರ ದರ್ಪ

ಕೊಡಗು: ಮೇ.28: ಮಡಿಕೇರಿಯ ಆರ್ಮಿ ಕ್ಯಾಂಟೀನ್ ಬಳಿ ದಿನಸಿ ಖರೀದಿಸಲು ಮುಗಿಬಿದ್ದಿದ್ದ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಇಂಡಿಯನ್ ಎಕ್ಸ್‍ಪ್ರೆಸ್ ವರದಿಗಾರ್ತಿ ಪ್ರಜ್ಞಾ ಮೇಲೆ ಪೆÇಲೀಸರು ದರ್ಪ ತೋರಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಜಿ ಯೋಧರು ಮುಗಿಬಿದ್ದಿದ್ದನ್ನು ಪ್ರಜ್ಞಾ ಅವರು ಚಿತ್ರೀಕರಿಸುತ್ತಿದ್ದರು. ಈ ವೇಳೆ ಪೆÇಲೀಸರು ವಿಡಿಯೋ ಮಾಡಲು ಐಡಿ ಕಾರ್ಡ್ ತೋರಿಸುವಂತೆ ಧಮ್ಕಿ ಹಾಕಿದ್ದಾರೆ.
ಕ್ಯಾಂಟೀನ್ ಸಿಬ್ಬಂದಿಯು ಪ್ರಜ್ಞಾ ಅವರ ಮೊಬೈಲ್ ಕಸಿದು, ಕೈ ಹಿಡಿದು ಎಳೆದಿದ್ದಾರೆ ಎಂದು ಆರೋಪಿಸಲಾಗಿದೆ.