
ದಾವಣಗೆರೆ.ಏ.೨೪: ಇಲ್ಲಿನ ಜಿಲ್ಲಾ ವರದಿಗಾರರ ಕೂಟದಲ್ಲಿ ಅಧ್ಯಕ್ಷ ಕೆ. ಏಕಾಂತಪ್ಪ ಅವರು ಕಾಯಕಯೋಗಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಬಸವಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕೂಟದ ಉಪಾಧ್ಯಕ್ಷ ರವಿಬಾಬು, ಕ್ರೀಡಾ ಕಾರ್ಯದರ್ಶಿ ರಾಮು, ಹಿರಿಯ ಪತ್ರಕರ್ತರಾದ ನಾಗರಾಜ್ ಬಡಿದಾಳ್, ಎಂ.ವೈ. ಸತೀಶ್, ಪದಾಧಿಕಾರಿಗಳಾದ ಸಂಜಯ್ ಕುಂದುವಾಡ, ಮಹಾದೇವ್, ಬಾಲಕೃಷ್ಣ ಶಿಬಾರ್ಲ, ಬಸವರಾಜ್ ನವಣಿ, ಲೋಕೇಶ್, ರುದ್ರಮ್ಮ, ಕಲ್ಲೇಶ್, ವಸಂತಕುಮಾರ್, ರಮೇಶ್, ಬಸವರಾಜ್, ಶಿವಮೂರ್ತಿ, ವಿಜಯ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.