ವರದಿಗಾರರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ-ವಿಶ್ವನಾಥ


ಸಂಜೆವಾಣಿ ವಾರ್ತೆ
ಕುಕನೂರು, ಜು.02:  ಕಾರ್ಯಾಂಗ ನ್ಯಾಯಾಂಗ ಶಾಸಕಾಂಗದ ಜೊತೆ ದೇಶದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗವು ವಿಶಿಷ್ಟ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪತ್ರಕರ್ತರು ನಿಷ್ಪಕ್ಷಪಾತವಾಗಿ ವರದಿ ಮಾಡಿದಾಗ ದೇಶದ ಅಭಿವೃದ್ಧಿ  ಸಾಧ್ಯ ಎಂದು ಯಲಬುರ್ಗಾ ತಾಲೂಕ ಪಂಚಾಯತಿ ಮಾಜಿ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಹೇಳಿದರು.
ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕುಕನೂರು ತಾಲೂಕ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ವಿಶ್ವನಾಥ ಮರಿಬಸಪ್ಪನವರು ಮಾತನಾಡುತ್ತಾ ದೇಶದ ಅಂಕುಡೊಂಕುಗಳನ್ನು ತಿದ್ದುತ್ತ ಭ್ರಷ್ಟರನ್ನು ಬಯಲಿಗೆಳಿದು ಶಿಕ್ಷಿಸುತ್ತ ಸಮಾಜವನ್ನು ಶುದ್ಧೀಕರಿಸುತ್ತ ಸಾಗುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದ್ದು ಪತ್ರಕರ್ತರ ಜೀವನಕ್ಕೆ ಸೂಕ್ತ ಭದ್ರತೆ ಇಲ್ಲದೆ ಇರುವುದು ಯೋಚನೆಯ ಸಂಗತಿ ತಕ್ಷಣ ಸರ್ಕಾರ ಪತ್ರಕರ್ತರ ಭದ್ರತೆಗೆ ಮುಂದಾಗಬೇಕು ಎಂದು ತಿಳಿಸಿದರು.
ಈ ವೇಳೆಯಲ್ಲಿ ಕೇಕ್ ಕತ್ತರಿಸಿ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಿ ಪತ್ರಿಕಾ ದಿನ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಘವೇಂದ್ರ ಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೀರೇಶಪ್ಪ, ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ಹನುಮಂತಪ್ಪ ಕುರಿ, ಕಾರ್ಯನಿರ್ತಾ ಪತ್ರಕರ್ತರ ಧ್ವನಿ ಸಂಘಟನೆಯ ಕುಕನೂರು ತಾಲೂಕ ಘಟಕದ ಉಪಾಧ್ಯಕ್ಷ ರವೀಂದ್ರ ತೋಟದ, ಕಾರ್ಯಾಧ್ಯಕ್ಷ ಸುನಿಲ ಕುಮಾರ ಮಠದ, ಖಜಾಂಚಿ ವೀರೇಶ ಹಿರೇಮಠ, ಸಂಘಟನಾ ಕಾರ್ಯದರ್ಶಿ ಲಿಂಗರಾಜ ದೊಡ್ಡಮನಿ, ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಶಾಲೆಯ ಮುಖ್ಯೋಪಾಧ್ಯಾಯ ಪ್ರೀತಿ ದೇಸಾಯಿ, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸದಸ್ಯರು ಭಾಗವಹಿಸಿದ್ದರು.
ಕೊನೆಗೆ ದೇವರಾಜ ಪಟಗಾರ ಶಿಕ್ಷಕರು ಆಭಾರ ಮನ್ನಿಸಿದರು.