ವರದಾನೇಶ್ವರಿ ತೊಟ್ಟಿಲು ಕಾರ್ಯಕ್ರಮ

ಕಲಬುರಗಿ:ಫೆ.15: ಮಕ್ತಂಪೂರದ ಗದ್ದುಗೆಮಠ ಶ್ರೀ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಶ್ರೀ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳ ಘನ ನೇತೃತ್ವದಲ್ಲಿ ವರದಾನೇಶ್ವರಿ ಗುಡ್ಡಾಪೂರದ ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನವು ದಿನಾಂಕ: 10-02-2024 ರಿಂದ ಪ್ರಾರಂಭಗೊಂಡು ದಿನಾಂಕ: 23.02.2024 ರಂದು ಮಹಾ ಮಂಗಲಗೊಳ್ಳುವುದು. ಪ್ರತಿನಿತ್ಯ ಸಾಯಂಕಾಲ 7.00 ಘಂಟೆಗೆ ಗವಾಯಿಗಳಾದ ಅನೀಲಕುಮಾರ ಮಠಪತಿ ಹಾಗೂ ತಬಲಾ ಅಡಿವಿಶಕುಮಾರ ಪಿ.ಎಂ. ಇವರ ಸಂಗೀತದೊಂದಿಗೆ ಶ್ರೀ ವೇದಮೂರ್ತಿ ಸದಾನಂದ ಶಾಸ್ತ್ರೀಗಳು ಸಂಸ್ಥಾನ ಹರ್ತಿಮಠ ಇವರ ಪ್ರವಚನದೋಂದಿಗೆ ಪ್ರಾರಂಭಗೊಂಡ ಪ್ರವಚನ ದಿನಾಂಕ:13.02.2024ರಂದು ವರದಾನೇಶ್ವರಿ ತೊಟ್ಟಿಲು ಕಾರ್ಯಕ್ರಮ ಅತಿ ವಿಜ್ರಂಭಣೆಯಿಂದ ಜರುಗಿತು.
ಅಕ್ಕನ ಬಳಗದ ತಾಯಿಂದಿರಿಂದ ವಿಶೇಷವಾಗಿ 5 ಮುದ್ದು ಹೆಣ್ಣು ಕಂದಮ್ಮಗಳನ್ನು ತೊಟ್ಟಿಲೊಳಗೆ ತೂಗಿ ವರದಾನೇಶ್ವರಿ ಎಂದು ಮರು ನಾಮಕರಣ ಮಾಡಿದರು. ಹೀಗೆ ಸಾಗಿ ಬಂದ ಪ್ರವಚಣವು ದಿನಾಂಕ:18.02.2024 ರಂದು ದಾನೇಶ್ವರಿ ಮತ್ತು ಸೋಮನಾಥರ ವಿವಾಹ ಕಾರ್ಯಕ್ರಮ ಜರುಗುವುದು. 20.02.24.ರಂದು ಉಚಿತ ನೇತ್ರ ತಪಾಸಣೆ ಶಿಬಿರ ಜೊತೆಗೆ ದಿನಾಂಕ: 21.02.2024 ರಂದು 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ದಿನಾಂಕ: 22.02.2024 ರಂದು ನಮ್ಮನ್ನ ಈ ನಾಡಿಗೆ ತಂದ ತಂದೆ-ತಾಯಿಗಳು ಪಾದ ಪೂಜೆಯ ಮಾಡಿ ತಂದೆ-ತಾಯಿಯರ ಆರ್ಶಿವಾದ ಪಡೆಯುವುದು ದಿನಾಂಕ: 23.02.2024 ರಂದು ಪುರಾಣಮಹಾಮಂಗಲ ಜೊತೆಗೆ ಕಾವಿ ಲೋಕದ ಸಂತ ಭವ್ಯ ಮಂದಿರದ ಸ್ಥಾಪಕರಾದ ವಿರಾಟಪೂರ ವಿರಾಗಿ ಶ್ರೀ ಹಾನಗಲ್ ಕುಮಾರ ಮಹಾ ಶಿವಯೋಗಿಗಳ 157ನೇ ಜಯಂತಿ ಮಹೋತ್ಸವ ಜರುಗುವುದು.
ಶ್ರೀ ಮಠದ ವತಿಯಿಂದ ಶ್ರೀ ಕುಮಾರ ಶಿವಯೋಗಿಗಳ ನಾಮಾಂಕಿತದ ಮೇಲೆ ಕೊಡ ಮಾಡುವ ಸಮಾಜ ಸಂಜೀವಿನಿ ಪ್ರಶಸ್ತಿಯನ್ನು ರೈತ ವಿಜ್ಞಾನಿ ಪ್ರಶಸ್ತಿ ಪುರಸ್ಕøತರಾದ ಶ್ರೀ. ಮ.ನಿ.ಪ್ರ ಗುರುಪಾದಲಿಂಗ ಮಹಾ ಶಿವಯೋಗಿಗಳ ಮುತ್ಯಾನ ಬಬಲಾದ ಯಳಸಂಗಿ ಇವರಿಗೆ ನೀಡುವುದಾಗಿ ಜೊತೆಗೆ ದಿನಾಂಕ: 24.02.2024 ರಂದು ಸಂಜೆ 6.00 ಗಂಟೆಗೆ ಹಲವಾರು ಮಠಾಧೀಶರ ಹಾಗೂ ಗಣ್ಯರು, ಭಕ್ತರ ಭಕ್ತಿಯಲ್ಲಿ ರೇವಣಸಿದ್ದೇಶ್ವರ ಮಹಾ ರತೋತ್ಸವ ಜರುಗುವುದು ಎಂದು ಶ್ರೀ ಮಠದ ಪೂಜ್ಯರು ತಿಳಿಸಿದರು.
ಪ್ರವಚನಕಾರರು ಶ್ರೀ ವೇ. ಮ. ಸದಾನಂದ ಶಾಸ್ತ್ರಜಿ ಸಂಸ್ಥಾನ ಹರ್ತಿಮಠ ಸಾ: ಹರ್ಲಾಪೂರ ತಾಲೂಕ ಗದಗ ಇವರು ನಡೆಸಿಕೊಡವರು. ಪೂಜ್ಯ ಶ್ರೀ ಮೃತ್ಯುಂಜಯ ದೇವರು ಕೊಳ್ಳೂರು ಇವರು ಸಭೆಯ ನಿರೂಪಣೆ ನಡೆಸಿಕೊಡುವರು. ಕಾರಣ ಸರ್ವಸಕಲ ಸದಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನಿತರಾಗಬೇಕೆಂದು ಶ್ರೀ ಮಠದ ಪೂಜ್ಯರು ತಿಳಿಸಿದರು.