ವರದಕ್ಷಿಣೆ ಕಿರುಕುಳ

ಕಲಬುರಗಿ,ಮೇ.27-ತವರು ಮನೆಯಿಂದ ಹಣ, ಬಂಗಾರ ತರುವಂತೆ ಗಂಡ, ಅತ್ತೆ ಮತ್ತು ನಾದಿನಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಬಗ್ಗೆ ತಾಡತೆಗನೂರ ಗ್ರಾಮದ ಶೋಭಾ ಗುರುರಾಜ ಸುತಾರ (35) ಅವರು ಫರತಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
10 ವರ್ಷಗಳ ಹಿಂದೆ ಗುರುರಾಜ ಸುತಾರ ಜೊತೆ ಮದುವೆಯಾಗಿದ್ದು, ನಾಲ್ಕು ಮಕ್ಕಳಿವೆ. ಮನೆ ಕಟ್ಟಲು, ಜಾಗ ಖರೀದಿಸಲು ಮತ್ತು ಬೈಕ್ ಕೊಳ್ಳಲು ತನ್ನ ಸಹೋದರ 2.35 ಲಕ್ಷ ರೂಪಾಯಿಗಳನ್ನು ತನ್ನ ಪತಿಗೆ ನೀಡಿದ್ದಾನೆ. ಇಷ್ಟಾದರೂ ಇನ್ನೂ ತವರು ಮನೆಯಿಂದ 1 ಲಕ್ಷ ರೂ. ಹಣ, ಬಂಗಾರ ತರುವಂತೆ ಪತಿ ಗುರುರಾಜ, ಅತ್ತೆ ಮಲ್ಲಮ್ಮ, ಮೈದುನ ಅಪ್ಪಾಸಾಬ ಮತ್ತು ನಾದಿನಿಯರಾದ ರೇಖಾ, ರಮಾದೇವಿ, ಸಂಗೀತಾ, ನೆಗೆಣ್ಣಿ ಕಾವೇರಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕೋರಂಟಿ ಹನುಮಾನ ಮಂದಿರ ಹತ್ತಿರದ ಕೋಟನೂರ ದರಿಯಾಪುರ ನಿವಾಸಿ ಸಂಧ್ಯಾಲತಾ ಪ್ರವೀಣಕುಮಾರ (34) ಅವರು ಪತಿ ಪ್ರವೀಣಕುಮಾರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮದುವೆ ಸಂದರ್ಭದಲ್ಲಿ 5 ತೊಲೆ ಬಂಗಾರ, 2 ಲಕ್ಷ ರೂ.ನಗದು ಕೊಟ್ಟಿದ್ದರೂ ತವರು ಮನೆಯಿಂದ ಇನ್ನೂ ಹಣತರುವಂತೆ ಪತಿ, ಅತ್ತೆ, ಮಾವ ಮತ್ತು ಕಿರುಕುಳ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೆ.ಕೆ.ನಗರದ ನಾಗರತ್ನ ಅಶೋಕ ಗುತ್ತೇದಾರ (35) ಅವರು ಗಂಡ, ಅತ್ತೆ ಮತ್ತು ನಾದಿನಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
15 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ಏನು ತಂದಿರುವುದಿಲ್ಲ ಎಂದು ಮಾನಸಿಕ, ದೈಹಿಕ ಕಿರುಕುಣ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಫರತಾಬಾದ, ಮಹಿಳಾ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.