ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.23: ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಪ್ರೇಮಕುಮಾರಿ ಎಂಬ ಯುವತಿ ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಿಕ್ಕೇರಿ ಪೆÇಲೀಸ್ ಠಾಣೆ ವ್ಯಾಪ್ತಿಯ ಲಿಂಗಾಪುರದಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದ ರಾಜೇಂದ್ರ ಹಾಗು ಮಂಜುಳ ದಂಪತಿಗಳ ಪುತ್ರಿ ಪ್ರೇಮಕುಮಾರಿ (26) ಎಂಬ ಯುವತಿ ಆತ್ಮಹತ್ಯೆಗೆ ಶರಣಾದ ಮಹಿಳೆ. ದಿನಾಂಕ 06-03-2022 ರಂದು ಮೈಸೂರಿನ ಎನ್.ಆರ್.ಮೋಹಲ್ಲಾ ನಿವಾಸಿ ಕುಮಾರಸ್ವಾಮಿ ಎಂಬುವವರ ಪುತ್ರ ರಾಘವೇಂದ್ರ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.ರಾಘವೇಂದ್ರ ಮತ್ತು ಪ್ರೇಮಕುಮಾರಿ ದಂಪತಿಗಳು ಕೆಲವು ತಿಂಗಳುಗಳ ಕಾಲ ಅನ್ಯೂನ್ಯವಾಗಿದ್ದರು ದಿನ ಕಳದಂತೆ ಈ ಜೋಡಿಯಲ್ಲಿ ಬಿರುಕು ಉಂಟಾಗಿ ನಂತರ ಪ್ರೇಮಕುಮಾರಿ ತಾಯಿಯ ಮನೆಗೆ ಹಿಂತಿರುಗಿದ್ದರು.
ತಾಯಿಯ ಮನೆಯಲ್ಲಿದ್ದುಕೊಂಡೆ ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿದ್ದರು. ಗಂಡ ರಾಘವೇಂದ್ರ ಮತ್ತು ಅವರ ಕುಟುಂಬಸ್ಥರು ನಿರಂತರ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆಯಿಂದ ಬೇಸತ್ತು ದಿನಾಂಕ 20-03-2024 ಬುಧುವಾರ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ಲಿಂಗಾಪುರ ಗ್ರಾಮದಲ್ಲಿ ಸುಮಾರು ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಪ್ರೇಮಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಿಕ್ಕೇರಿ ಪೆÇಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಲಿಂಗಾಪುರ ಗ್ರಾಮದಲ್ಲಿ ಮೃತ ದುರ್ದೈವಿ ಪ್ರೇಮಕುಮಾರಿ ಅವರ ಅಂತ್ಯ ಸಂಸ್ಕಾರ ನೆರವೇರಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ.ಈ ಘಟನೆಯ ಸಂಬಂಧ ಕಿಕ್ಕೇರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮೃತ ಪ್ರೇಮಕುಮಾರಿ ಪೆÇೀಷಕರು ಆಗ್ರಹಿಸಿದ್ದಾರೆ.