ವರಕವಿ ಬೇಂದ್ರೆಯವರ ಕಾವ್ಯ ಜನಸಾಮಾನ್ಯರ ಆಸ್ತಿ*:- ಡಾ.ಹೊನ್ನಪ್ಪನವರ್

ಸಂತೇಬೆನ್ನೂರು.ಮಾ.೨೯; ಕನ್ನಡ ಕಾವ್ಯ ಸಧ್ಯ ಘಂ- ಗುಡ್ತಿದೆ… ಆಧುನಿಕ ಕಾಲದಲ್ಲಿ ಅನೇಕ ಕವಿಗಳು ಬಂದು ಹೋಗಿದ್ದಾರೆ,ಬರುತ್ತಿದ್ದಾರೆ ಕೂಡ. ಆದರೆ ವರಕವಿ ಬೇಂದ್ರೆಯವರ ರೀತಿಯಲ್ಲಿ ಸಶಕ್ತ ಕವಿಯಾಗಿ ಗಟ್ಟಿಯಾದ ನೆಲೆಯಲ್ಲಿ ನಿಂತ ಉದಾಹರಣೆಗಳಿಲ್ಲ, ಬೇಂದವರೆಲ್ಲರೂ ಬೇಂದ್ರೆಯಾಗಲಾರರು ಎಂದು ರಾಣೆಬೆನ್ನೂರಿನ ಸಾಹಿತಿ ಪ್ರೊಫೆಸರ್  ಹೊನ್ನಪ್ಪ ಹೊನ್ನಪ್ಪನವರ್ ಅಭಿಪ್ರಾಯಪಟ್ಟರು.ಸಂತೆಬೆನ್ನೂರು ಗ್ರಾಮದ ಜನಪ್ರಿಯ ಸಾಹಿತ್ಯ ಸಂಸ್ಕೃತಿ ಸಮಾಜಮುಖಿ ಕಾರ್ಯ ಬಿಂಬಿಸುವ ‘ ಮಾಸದ ಮಾತು’ ಕಾರಿದ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.ಇಲ್ಲಿನ ವಿಜಯ ಶಾಲೆಯಲ್ಲಿ ಏರ್ಪಡಿಸಿದ್ದ ಸಾಹಿತ್ಯ ಭವನದಲ್ಲಿ ಶ್ರೀ ಯುತರು ಬೇಂದ್ರೆ ಬದುಕುಬರಹ ಕುರಿತು ಉಪನ್ಯಾಸ ನೀಡುತ್ತಾಬಡತನದಲ್ಲಿ ಬೆಂದ ಬೇಂದ್ರೆ ಮನೆ ಭಾಷೆ ಮರಾಠಿಯಾದರೂ ಕನ್ನಡ ಭಾಷೆಯಲ್ಲಿ ಬರೆದು ಜನಪ್ರೀತಿ ಗಳಿಸಿದರು. ಕವಿಯ ಬದುಕಿನಲ್ಲಿ ಏನು ಬಂದರೂ ಕಾವ್ಯ ಪ್ರೀತಿ ಬದಿಗೊತ್ತದೇ ಗರಿ, ನಾದಲೀಲೆ, ಸಖೀಗೀತ, ನಾಕುತಂತಿ ಮುಂತಾದ ಕಾವ್ಯ ಕುಸುಮಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದರು. ಬಡತನ ಅವರ ಉಸಿರಾಗಿದ್ದರೂ ಎಂದೂ ಬದುಕಿಗೆ ಶರಣಾಗದೇ ಎಲ್ಲಾ ಎದುರಿಸಿದ ಛಲಗಾರ ಬೇಂದ್ರೆ!ನರಬಲಿ ಪದ್ಯ ಬರೆದು ಬ್ರಿಟಿಷ್ ಸರ್ಕಾರ ಕಾನೂನಿಂದ ಜೈಲು ಕಂಡ ಬೇಂದ್ರೆ ಜಾನಪದ ಶೈಲಿಯ ಪದ ಗಾರುಡಿಗ ಎಂದರು.ಶಿಕ್ಷಕರಾದ  ಗಣೇಶ್ – ಸೋಮಣ್ಣ  ಈ ಸಾಹಿತ್ಯ ಕಾರ್ಯಕ್ರಮ ದ ಪ್ರಾಯೋಜಕರಾಗಿದ್ದರು.ಪ್ರಸ್ತುತ ಕಾರ್ಯಕ್ರಮ ದಲ್ಲಿ ಸಬ್ ಇನ್ಸ್ಪೆಕ್ಟರ್  ಶಿವರುದ್ರಪ್ಪ ಮೇಟಿ, ಸನಾವುಲ್ಲಾ ನವಿಲೇಹಾಳ್, ಚನ್ನಾಪುರ ನಟರಾಜ್, ಚಿತ್ರ ದುರ್ಗದ ಸೈನಿಕ ತಿಪ್ಪೇಶ್, ಸುಮತೀಂದ್ರ ನಾಡಿಗ, ವಾಹಿದ್ ಸಾರ್, ಪಂಕಜವೀರೇಶ್,ದೇವಣ್ಣ, ಮಲ್ಲಿಕಾರ್ಜುನ, ಕಮಲಮ್ಮ ಇತರರು ಹಾಜರಿದ್ದರು.
ಬಾಕ್ಸ್ಜಾತಿ,ಮತ,ಪಂಥ,ಚುನಾವಣೆ, ಅಧಿಕಾರ ಅನ್ನುತ್ತಾ ಇಂದಿನ ಯುವಕರು ಕಳೆದು ಹೋಗುತ್ತಿರುವಾಗ ಈ ಊರಿನ ಕೆಲ ಹುಡುಗರು ಮಾಸದ ಮಾತು ಬಳಗ ಕಟ್ಟಿ ಕನ್ನಡ ಸಾಹಿತ್ಯ ಇಡೀ ನಾಡಿಗೆ ಹರಡುತ್ತಿದ್ದಾರೆ, ಸಾಹಿತ್ಯ ಪರಿಷತ್ ಮಾಡೋ ಕೆಲಸ ಈ ಬಳಗ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಬಳಗಕ್ಕೆ ಸಮಾಜ,ಸಂಘ ಸಂಸ್ಥೆ, ಪರಿಷತ್ತು ಬೆನ್ನಿಗೆ ನಿಂತರೆ ಸಾಹಿತ್ಯ ಸೇವೆ ಮತ್ತಷ್ಟು ಅರ್ಥ ಪಡೆದು ಕೊಳ್ಳುತ್ತದೆ.– ಶಿವರುದ್ರಪ್ಪ ಮೇಟಿ
 ಸಬ್ ಇನ್ಸ್ಪೆಕ್ಟರ್, ಸಂತೆಬೆನ್ನೂರು