ವಯೋ ವಜ್ರಮಹೋತ್ಸವ ಘೋರ್ಪಡೆಗೆ ಸನ್ಮಾನ

ತಾಳಿಕೋಟೆ:ಏ.2: ತಾಳಿಕೋಟೆಯ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರಿಗೆ 75ವರ್ಷ ವಯೋಮಿತಿ ಹೊಂದಿದ್ದರ ಪ್ರಯುಕ್ತ ವಜ್ರ ಮಹೋತ್ಸವ ಆಚರಣೆಯಲ್ಲಿ ಸೋಮವಾರರಂದು ಸಾಯಂಕಾಲ ಪಟ್ಟಣದ ಶಿವಾಜಿ ಮಹಾರಾಜರ ವೃತ್ತದಲ್ಲಿ ಆತ್ಮೀಯರು, ಹಿತೈಷಿಗಳು, ಸ್ನೇಹಿತರು ಕೂಡಿ ಆಚರಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು.
ಯುವ ಸಂಘಟಿಕರು ಈ ಕುರಿತು ಜನ್ಮದಿನೋತ್ಸವಕ್ಕಾಗಿ ತರಲಾದ ಬೃಹತ್ ಆಕಾರದ ಕೇಕ್‍ನ್ನು ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಕತ್ತರಿಸಿ ಆನಂದದ ಹುಟ್ಟು ಹಬ್ಬ ಆಚರಿಸಲು ಸಿದ್ದರಾಗಿರುವ ಎಲ್ಲರಿಗೂ ಶುಭಕೋರಿದರಲ್ಲದೇ ನನ್ನಂತೆ ಎಲ್ಲರೂ ಆಯುಷ್ಯ ಆರೋಗ್ಯವಂತರಾಗಿ ಬಾಳಿ ಬೆಳಗಬೇಕೆಂದು ಆಶಿಸಿದರು.
ಈ ಸಮಯದಲ್ಲಿ ಮಾತನಾಡಿದ ಯುವ ಮುಖಂಡ ಪ್ರಕಾಶ ಹಜೇರಿ ಅವರು ಮಾತನಾಡಿ ಕಳೆದ 40 ವರ್ಷಕ್ಕೂ ಮೇಲ್ಪಟ್ಟು ಪತ್ರಿಕಾ ವೃತ್ತಿಯಲ್ಲಿ ಮುನ್ನುಗ್ಗುತ್ತಾ ಪ್ರಮುಖ ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ತಾಳಿಕೋಟೆ ಎಲ್ಲ ಕೋಮಿನ ಜನತೆ ಯೊಂದಿಗೆ ಸೈ ಎನ್ನಿಸಿಕೊಂಡಿದ್ದಾರಲ್ಲದೇ ಪಟ್ಟಣದ ಸ್ಥಿತಿಗತಿ ಕುರಿತು ಪತ್ರಿಕೆಗಳಲ್ಲಿ ನಿರ್ಭಿಡೆಯ ವರಧಿಗಳನ್ನು ಮಾಡಿ ಸಂಬಂದಿಸಿದ ಹಿರಿ ಕಿರಿ ಅಧಿಕಾರಿಗಳು ಕೂಡಲೇ ಸ್ಪಂದಿಸುವಂತೆ ಮಾಡಿದ ಕೀರ್ತಿ ಘೋರ್ಪಡೆ ಅವರಿಗೆ ಸಲ್ಲುತ್ತದೆ ಎಂದರು.
ಇನ್ನೋರ್ವ ವೀ.ವಿ.ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ ಅವರು ಮಾತನಾಡಿ ಘೋರ್ಪಡೆ ಅವರ ಸೇವಾ ಕಾರ್ಯದಲ್ಲಿ ನಾವು ಕೂಡಾ ಭಾಗವಹಿಸುತ್ತಾ ಸಾಗಿಬಂದಿದ್ದು ತಾಳಿಕೋಟೆ ಪಟ್ಟಣಕ್ಕೆ ಅಗತ್ಯವಾದಂತಹ ಅನೇಕ ಅಗತ್ಯ ಸರ್ಕಾರಿ ಸರ್ಕಾರೇತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿದ್ದಾರಲ್ಲದೇ ನಾವು ಮಾಡಿದಂತಹ ಕಾರ್ಯಕ್ರಮಗಳ ಸುದ್ದಿಗಳನ್ನು ಒಳ್ಳೆಯ ಮನದಟ್ಟುವಂತೆ ಮಾಡಿ ಪಟ್ಟಣದ ಜನತೆಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿಕೊಂಡಿದ್ದಾರೆಂದರು.
ಇದೇ ಸಮಯದಲ್ಲಿ ರಾಜ್ಯ ಮೌರ್ಯ ಪ್ರಶಸ್ತಿ ವಿಜೇತರಾದ ಶ್ರೀಮತಿ ಸುವರ್ಣಾ ಬಿರಾದಾರ ಅವರು ಘೋರ್ಪಡೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರಲ್ಲದೇ ಅವರ ಸೇವಾ ಕಾರ್ಯ ಕುರಿತು ಗುಣಗಾನ ಮಾಡಿದರು.
ಇನ್ನೋರ್ವ ವೀ.ವಿ.ಸಂಘದ ಅಧ್ಯಕ್ಷರಾದ ವಿರುಪಾಕ್ಷಯ್ಯ ಹಿರೇಮಠ(ಹಂಪಿಮುತ್ಯಾ) ಅವರು ಕೂಡಾ ಘೋರ್ಪಡೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಅವರು ಸಲ್ಲಿಸುತ್ತಾ ಸಾಗಿಬಂದ ಪತ್ರಿಕಾ ಸೇವೆ ಕುರಿತು ಗುಣಗಾನ ಮಾಡಿದರು.
ಈ ಸಮಯದಲ್ಲಿ ಯುವ ಮುಖಂಡರುಗಳಾದ ಪುರಸಭಾ ಸದಸ್ಯ ಅಣ್ಣಾಜಿ ಜಗತಾಪ, ಎಂ.ಎಸ್.ಸರಶೆಟ್ಟಿ, ಅಶೋಕ ಜಾಲವಾದಿ, ಮಂಜುನಾಥ ಶೆಟ್ಟಿ, ರವಿ ಕಟ್ಟಿಮನಿ, ಪ್ರಭು ಬಿಳೇಭಾವಿ, ಮುರುಗೇಶ ಕೋರಿ, ಮಲ್ಲು ಮೇಟಿ, ರಾಮು ಜಗತಾಪ, ಮೊದಲಾದವರು ಪಾಲ್ಗೊಂಡಿದ್ದರು.