ವಯೋ ನಿವೃತ್ತ ಶಬ್ಬೀರ್‍ಗೆ ಸನ್ಮಾನ

ಬೀದರ, ಜೂ.2:ಕ್ರೀಡಾ ಇಲಾಖೆಯಲ್ಲಿ ಮೇಕರ್ ಆಗಿ ಸುಮಾರು 41 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಶಬ್ಬೀರ್ ಅಹ್ಮದ್ ಅವರನ್ನು ಗಜಾನನ ಕ್ರಿಕೆಟ್ ಅಕಾಡೆಮಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ನೆಹರು ಕ್ರೀಡಾಂಗಣದ ಕ್ರಿಕೆಟ್ ನೆಟ್‍ನಲ್ಲಿ ಶುಕ್ರವಾರ ಅಕಾಡೆಮಿ ಅಧ್ಯಕ್ಷ ಸಂಜಯ ಜಾಧವ ಅವರ ನೇತೃತ್ವದಲ್ಲಿ ಶಬ್ಬೀರ್ ಅವರನ್ನು ಸತ್ಕರಿಸಲಾಯಿತು. ಕ್ರೀಡಾ ಇಲಾಖೆಯಲ್ಲಿ ನಾಲ್ಕು ದಶಕಗಳಕಾಲ ಮೇಕರ್ ಆಗಿ ದಕ್ಷತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಾರೆ. ಕ್ರೀಡಾಂಗಣದಲ್ಲಿ ಆಯೋಜಿಸುವ ಪ್ರತಿ ಕ್ರೀಡೆಗಳು ಯಶಸ್ವಿಯಾಗಿ ನಡೆಯುವಲ್ಲಿ ಶಬ್ಬೀರ್ ಪಾತ್ರವೂ ಮುಖ್ಯವಾಗಿತ್ತು ಎಂದು ಅಕಾಡೆಮಿ ಪ್ರಮುಖರು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುನೀಲ ಮೊಟ್ಟಿ, ವಸಂತ ಕುಲಕರ್ಣಿ, ಅನೀಲಕುಮಾರ ದೇಶಮುಖ ಮತ್ತು ವಿಕ್ಕಿ ಅತ್ವಾಲ್ ಉಪಸ್ಥಿತರಿದ್ದರು.