ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.08 ತಾಲೂಕಿನಲ್ಲಿ ವಯೋ ನಿವೃತ್ತಿ ಹೊಂದಿದ ನೌಕರರಾದ ಮೈದೂರ್ ಕೊಟ್ರೇಶಪ್ಪ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಲ್ಲಬಾಪುರ ತಾಲೂಕು ಹಾಗೂ ವಿ ಎಸ್ ಎಸ್ ಎನ್ ಸೊಸೈಟಿ ಮೋರಿಗೇರಿಯಲ್ಲಿ ಲೆಕ್ಕಿಗರಾಗಿ ಸೇವೆಸಲ್ಲಿಸಿದ ಮೇಟಿ ಕೊಟ್ರೇಶಪ್ಪ ಇವರನ್ನು ಸನ್ಮಾನಿಸಲಾಯಿತು.
ಮೋರಿಗೇರಿ ಗ್ರಾಮದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ಸ್ಥಳೀಯ ನೌಕರ ಘಟಕ ಸಕ್ರಿಯವಾಗಿರುವುದು ಶ್ಲಾಘನೀಯ ಎಂದು ನಿವೃತ್ತ ನೌಕರರಾದ ಎಂ.ನಾಗರಾಜ ಸಾರ್ ಅಭಿಪ್ರಾಯ ಪಟ್ಟರು.
ಸದರಿ ನೌಕರರ ಕಿರು ಪರಿಚಯವನ್ನು ಸುರೇಶ್ ಹುಳಿಮಜ್ಗಿ ಶಿಕ್ಷಕರು ಸಕ್ರಿಹಳ್ಳಿ ನರೆವೇರಿಸಿದರು ಹಾಗೂ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಬಾವಿ ರವೀಂದ್ರ ನಿವೃತ್ತ ಮುಖ್ಯೋಪಾಧ್ಯಾಯರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ನೌಕರ ಘಟಕದ ವೀರಭದ್ರಪ್ಪ ,ಹೆಚ್ ರಮೇಶ್,ಕೆ. ಮಲ್ಲಪ್ಪ , ಕೆ.ಎಸ್ ವೀರೇಶ್, ಕೆ. ಪಂಪನಗೌಡ , ಕೆ ನಿಂಗನಗೌಡ ಕೊಬ್ಬಜ್ಜಿ ಕೊಟ್ರೇಶ್ , ಸಿ.ವಿರೂಪಾಕ್ಷಪ್ಪ , ಟಿ.ಕೊಟ್ರೇಶ್ ಎಸ್ ಪ್ರಭಾಕರ್ ಮುಂತಾದವರಿದ್ದರು. ಕಾರ್ಯಕ್ರಮದ ಪ್ರಾರ್ಥನೆ ಹಾಗೂ ನಿರೂಪಣೆಯನ್ನು ಸಿ ಪರಶುರಾಮ್ ಹಾಗೂ ಸ್ವಾಗತ ಮತ್ತು ವಂದನೆಯನ್ನು ಎಚ್. ಡಿ ನಿಂಗಪ್ಪ ಶಿಕ್ಷಕರು ನಿರ್ವಹಿಸಿದರು.