ವಯೋವೃದ್ದನಿಗೆ ನೆರವಾದ ಶಾಸಕರು

ದಾವಣಗೆರೆ.ಮೇ.೩೧; ಕೊವಿಡ್ ಸೊಂಕಿಗೆ ಒಳಗಾದ ವಯೊವೃದ್ದರೊಬ್ಬರಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ನೆರವಾಗಿದ್ದಾರೆ.ಹೊನ್ನಾಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ ಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಆಸ್ಪತ್ರೆಯ ಹೊರಭಾಗದಲ್ಲಿ ಬೆಡ್ ಸಿಗದೆ ಕುಳಿತಿದ್ದ ವಯೊವೃದ್ದರೊಬ್ಬರಿಗೆ ಕೂಡಲೇ ಬೆಡ್ ವ್ಯವಸ್ಥೆ ಮಾಡಿಸಿ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.ಈ ವೇಳೆ ವಯೋವೃದ್ದರು ಸೇರಿದಂತೆ ಕೊವಿಡ್ ವಾರ್ಡ್ ನಲ್ಲಿದ್ದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿ ೮೦೦ ಬೆಡ್ ಗಳ ಕೊವಿಡ್ ಕೇರ್ ಸೆಂಟರ್ ಇಂದಿನಿಂದ ಆರಂಭವಾಗಲಿದೆ.ಸೊಂಕಿತರನ್ನು ಗುರುತಿಸಿ ಕೂಡಲೇ ಕೇರ್ ಸೆಂಟರ್ ಗೆ ಕರೆತರಬೇಕು ಇದರಿಂದ ಸೊಂಕು ವ್ಯಾಪಕವಾಗಿ ಇಳಿಮುಖವಾಗಲು ಸಾಧ್ಯ ಎಂದು ಪಿಡಿಒ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.