ವಯೋನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ

ಬೀದರ ಏ 2: ಕಪಲಾಪೂರ (ಡಬ್ಲ್ಯೂ)ದ ಸರಕಾರಿ ಹಿರಿಯಪ್ರಾಥಮಿಕ ಉರ್ದು ಶಾಲೆ ಯಲ್ಲಿ ಸುಮಾರು 25 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆಸಲ್ಲಿಸಿ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ಪ್ರಯುಕ್ತ ಮಲ್ಲಿಕಾರ್ಜುನ ಝಿಳ್ಳೆ ಅವರನ್ನು ಗ್ರಾಮಸ್ಥರಿಂದ ಮತ್ತು ಎಸ್.ಡಿ.ಎಂ.ಸಿ. ಸಮಿತಿ ವತಿಯಿಂದ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕ.ರಾ.ಪ್ರಾ.ಶಾ. ಗ್ರೇಡ್-2ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಅತ್ಯಂತವಿಜೃಂಭಣೆಯಿಂದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ಜರುಗಿತು.
ಸಮಾರಂಭಕ್ಕೆ ಬೀದರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತಮದಾನೆ,ಡಯಟ್‍ನ ಉಪನ್ಯಾಸಕ ಕುಶಾಲ ಯರನಳ್ಳೆ ಮತ್ತುಕ.ರಾ.ಪ್ರಾ. ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕಅಧ್ಯಕ್ಷ ರಾಜುಸಾಗರ, ಜಿಲ್ಲಾ ಸಂಘದಪ್ರಧಾನ ಕಾರ್ಯದರ್ಶಿ ಪ್ರಭುಲಿಂಗತೂಗಾಂವೆ, ತಾಲೂಕಾ ಉಪಾಧ್ಯಕ್ಷ ಮನೋಹರ ಕಾಶಿ,ದತ್ತಾತ್ರೇಯ ಸ್ವಾಮಿ,ಸಹ ಕಾರ್ಯದರ್ಶಿ ಡೇವಿಡ್, ಕೋಶಾಧ್ಯಕ್ಷ ಹೈದರಲಿ ಮತ್ತು ಸಮೂಹ ಸಂಪನ್ಮೂಲವ್ಯಕ್ತಿಗಳಾದ ಸುನೀಲಕುಮಾರ ಗಾಯಕವಾಡಮತ್ತು ಬೀದರ ತಾಲೂಕಿನ ಗ್ರೇಡ್-2 ದೈಹಿಕ ಶಿಕ್ಷಣಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಪತಿಮೇತ್ರೆ ಹಾಗೂ ಗ್ರಾಮದ ಗ್ರಾಮ ಪಂಚಾಯತ್‍ಅಧ್ಯಕ್ಷರು ಎಲ್ಲಾ ಸದಸ್ಯರು, ಎಸ್.ಡಿ.ಎಂ.ಸಿ.ಅಧ್ಯಕ್ಷ ಎಂ.ಡಿ. ಅಯುಬ ಖಾನ್ ಮತ್ತು ಚಂದ್ರಕಾಂತ ಕೋಟೆ ಮತ್ತು ಹಣಮಂತರಾವ ವಗದಾಳೆ ಹಿರಿಯ ನಿವೃತ್ತ ಶಿಕ್ಷಕರುಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ ಮಾತನಾಡಿ ಮಲ್ಲಿಕಾರ್ಜುನ ಜಿಳ್ಳೆ, ಸೇವೆ ಅತ್ಯಂತ ತೃಪ್ತಿಕರ ಹಾಗೂ ಶ್ಲಾಘನೀಯ ಎಂದು ಬಣ್ಣಿಸಿದರು.ಹಣಮಂತರಾವ ವಗದಾಳೆ ಎಂ.ಡಿ. ಅಯುಬಖಾನ್, ರಾಜುಸಾಗರ ಪ್ರಭುಲಿಂಗ ತೂಗಾಂವೆ ಮಾತನಾಡಿದರು. ಇದೇ ವೇಳೆಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪರಮೇಶ್ವರ ಬಿರಾದಾರ ಮಿರ್ಜಾಪೂರ ಬಸವಕಲ್ಯಾಣ ಅವರನ್ನು ಹಾಗೂ ಕಿರಣ ಶಿಂಧೆಕಪಲಾಪೂರ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಮುಖ್ಯ ಗುರುಗಳಾದ ಅಕ್ಬರ್ ಜಹಾನ್ ಸರ್ವರನ್ನು ಸ್ವಾಗತಿಸಿದರು.ಶ್ರೀಪತಿ ಮೇತ್ರೆ ನಿರೂಪಣೆ ಮಾಡಿದರು.