ವಯೋನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ

ಸಿರುಗುಪ್ಪ ಜೂ 01 : ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ವಯೋಸಹಜ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ ಮಾತನಾಡಿ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ನೌಕರರಿಗೂ ವರ್ಗಾವಣೆ, ನಿವೃತ್ತಿ ಸಾಮಾನ್ಯವಾಗಿದ್ದು ಕೆಲಸದ ಅವಧಿಯ ನಂತರ ಮರೆಯಾದಂತಾಗುತ್ತಾರೆ ಆದರೆ ಉತ್ತಮವಾಗಿ ಕೆಲಸ ನಿರ್ವಹಿಸಿದ ಶಿಕ್ಷಕರಿಗೆ ಸಮಾಜದಲ್ಲಿ ಗುರುಗಳ ಸ್ಥಾನದಲ್ಲಿ ದೊರೆತು ಜನರಿಂದ ನಿವೃತ್ತಿಯ ನಂತರವೂ ಗೌರವಯುತವಾದ ಸನ್ಮಾನ ದೊರೆಯುತ್ತದೆ.
ಸನ್ಮಾನ ಸ್ವೀಕರಿಸಿ ಚೊಕ್ಕ ಹನುಮಂತಗೌಡ ಮಾತನಾಡಿ ಸಮಾಜದಲ್ಲಿ ಶಿಕ್ಷಕರ ಪಾತ್ರ ಅತಿ ಮಹತ್ವದ್ದು, ಗುರುವಿನ ಸ್ಥಾನಮಾನ ಕೆಲವರಿಗೆ ಮಾತ್ರ ದೊರೆತು, ಇನ್ನುಳಿದ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಸೃಷ್ಠಿಸುವಂತ ಭಾಗ್ಯ ಶಿಕ್ಷಕರಿಗೆ ಮಾತ್ರ ಇರುತ್ತದೆ, ನಾವು ಕಲಿಸಿದ ವಿದ್ಯಾರ್ಥಿಗಳು ನಮಗಿಂತ ಹಿರಿಯ ಹುದ್ದೆಗಳನ್ನು ಪಡೆದುಕೊಂಡು ಸಾರ್ವಜನಿಕರ ಸೇವೆಗೈದಾಗ ಸಿಗುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ ಎಂದು ಅಭಿಪ್ರಾಯಿಸಿದರು.
ಚೊಕ್ಕಹನುಮಂತಗೌಡ, ಪ್ರಭಕಾರ್, ರಾಮಾಭಾಯಿ ವಯೋಸಹಜ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಡಾ.ಬಿ.ಬಸವರಾಜ, ದೈಹಿಕ ಪರೀವಿಕ್ಷಕ ರೆಹಮತುಲ್ಲ್ಲಾ, ಬಿಆರ್‍ಪಿ ನಾಗರಾಜ, ಸಿ.ಆರ್.ಪಿಗಳಾದ ರಾಜಶೇಖರ, ಕೋರಿಜಗದೀಶ, ಮಹಾಂತೇಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಸಂಘಟನ ಕಾರ್ಯದರ್ಶಿ ಗೀತಾ ನಟರಾಜ ಸ್ವಾಮಿ, ಶಿಕ್ಷಕರಾದ ಅರುಣಪ್ರತಾಪ್‍ರೆಡ್ಡಿ, ದಿವಾಕರ ನಾರಾಯಣ, ಎರೆಪ್ಪ, ಈರಣ್ಣ, ಹನುಮಂತಪ್ಪ, ಬಸವನಗೌಡ, ಮಂಜುನಾಥಗೌಡ, ಗಜೇಂದ್ರ ಇದ್ದರು.